ರಹಸ್ಯ ಮೀಟಿಂಗ್ ಬಗ್ಗೆ ಗೃಹ ಸಚಿವರು ಹೇಳಿದ್ದೇನು?

ರಹಸ್ಯ ಮೀಟಿಂಗ್ ಬಗ್ಗೆ ಗೃಹ ಸಚಿವರು ಹೇಳಿದ್ದೇನು?

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಬಗ್ಗೆ ಮಹತ್ವದ ತೀರ್ಮಾನಗಳು ಮತ್ತು ಸಭೆಗಳು ನಡೆಯುತ್ತಿವೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಸಚಿವರುಗಳು ಒಟ್ಟಿಗೆ ಸೇರಿ ಡಿನ್ನರ್ ಮಾಡುವುದರ ಜೊತೆಗೆ ಮಹತ್ವದ ಸಭೆಯನ್ನು ಮಾಡಿದ್ದಾರೆ ಎಂದು ಇದೀಗ ರಾಜ್ಯ ರಾಜಕೀಯದಲ್ಲಿ ಗ್ರಾಸವಾಗಿ ಚರ್ಚೆಯಾಗುತ್ತಿದೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಪ್ರತಿಕ್ರಿಯಿಸಿ, ಮೀಟಿಂಗ್ ಏನು ಮಾಡಿಲ್ಲ ನಾವು ಕೇವಲ ಡಿನ್ನರ್ ಮಾಡಿದ್ದೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಇದನ್ನೂ ಓದಿ: ಹಿಂದಿವಾಲರ ಹಾವಳಿಗೆ ಬ್ರೇಕ್ ಹಾಕಿ

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿಗೆ ಬಂದಿದ್ದೆ ಹಾಗಾಗಿ ಸಚಿವ‌ ಹೆಚ್ ಸಿ ಮಹದೇವಪ್ಪ ಅವರು ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆ ನೀಡಿದ್ದರು ಹಾಗಾಗಿ ನಾವು ಮಹದೇವಪ್ಪ ಅವರ ಮನೆಗೆ ಕೇವಲ ಡಿನ್ನರ್ ಗಾಗಿ ಹೋಗಿದ್ದೇವೆ ಹೊರತಾಗಿ ಯಾವುದೇ ರೀತಿ ಮೀಟಿಂಗ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ ಎಂದು ಮತ್ತೊಮ್ಮೆ ಸಾರಿ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ.

 

Related