ಟೊಮೇಟೊ ಬೆಲೆ ದಿಢೀರ್ ಕುಸಿತ, ರಸ್ತೆಗೆ ಬೆಳೆ ಸುರಿತ ರೈತ..!

ಟೊಮೇಟೊ ಬೆಲೆ ದಿಢೀರ್ ಕುಸಿತ, ರಸ್ತೆಗೆ ಬೆಳೆ ಸುರಿತ ರೈತ..!

ಚಿತ್ರದುರ್ಗ ಆ 06 : ಟೊಮೇಟೊ ಬೆಲೆಯಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆ ಸುರಿದಿದ್ದಾರೆ.

ಈ ವರ್ಷ ಮೇ ತಿಂಗಳಲ್ಲಿ ಕೆಜಿಗೆ 100 ರೂ.ಗೆ ಮಾರಾಟವಾಗಿದ್ದ ಟೊಮೇಟೊ ಬೆಲೆಯಲ್ಲಿ ಭಾರಿ ಕುಸಿತ ಕಂಡಿದ್ದು, 15 ಕೆಜಿ ಇರುವ ಟೊಮ್ಯಾಟೊ ಬಾಕ್ಸ್‌ ಅನ್ನು 10 ರುಪಾಯಿಗೂ ತೆಗೆದುಕೊಳ್ಳಲು ವ್ಯಾಪಾರಸ್ಥರು ಸಿದ್ಧರಿಲ್ಲ. ಇದರಿಂದ ಬೇಸರಗೊಂಡ ರೈತರು ಟೊಮೆಟೊವನ್ನು ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಮೇಲೆ ಸುರಿದು ಟ್ರಾಕ್ಟರ್‌ಗಳನ್ನು ಚಲಾಯಿಸಿದರು.

ಈ ಪ್ರದೇಶದಲ್ಲಿ ಸಂಸ್ಕರಣಾ ಘಟಕಗಳ ಕೊರತೆಯೂ ಟೊಮೆಟೊ ಬೆಳೆಗಾರರ ​​ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗಷ್ಟೇ ಟೊಮೇಟೊ ದಾಖಲೆಯ ಬೆಲೆ ಬಾಚಿದ್ದರಿಂದ ಕಲ್ಲಹಳ್ಳಿ, ತೊರೆಕೋಲಮ್ಮನಹಳ್ಳಿ, ನಾಯಕನಹಟ್ಟಿ ಮತ್ತಿತರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತನೆ ಮಾಡಿದ್ದರು. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಇಳುವರಿ  ಬಂದಿರುವುದರಿಂದ ಬೆಲೆ ಕುಸಿದಿದೆ.

ನಾಲ್ಕು ಎಕರೆಯಲ್ಲಿ ಟೊಮೇಟೊ ಬೆಳೆದಿದ್ದು, ಉತ್ತಮ ಇಳುವರಿ ಬಂದಿದೆ. ಶುಕ್ರವಾರ ನಾನು 150 ಬಾಕ್ಸ್ ಕೊಯ್ಲು ಮಾಡಿದ್ದ,  ಆದರೆ ವ್ಯಾಪಾರಿಗಳು ಬಾಕ್ಸ್ ಗೆ 10 ರೂಪಾಯಿಗೂ ತೆಗೆದುಕೊಳ್ಳಲು ಬರುತ್ತಿಲ್ಲ, ಹೀಗಾಗಿ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿ ಪಕ್ಕದಲ್ಲಿ ಟೊಮೇಟೊ ಹಾಕಲು ನಿರ್ಧರಿಸಿದ್ದೇನೆ. ನನ್ನ ಹೂಡಿಕೆಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಈಗ ನಾನು 4 ಲಕ್ಷ ರೂಪಾಯಿ ಸಾಲವನ್ನು ಹೊಂದಿದ್ದೇನೆ ಎಂದು ಕಲ್ಲಹಳ್ಳಿಯ ರೈತ ಮಾರುತೇಶ್ ಹೇಳಿದ್ದಾರೆ.

Related