ಆಡಳಿತ ಅಧಿಕಾರಿಯ ನಿರ್ಲಕ್ಷ್ಯ : ಸಾರ್ವಜನಿಕರ ಆಕ್ರೋಶ

ಆಡಳಿತ ಅಧಿಕಾರಿಯ ನಿರ್ಲಕ್ಷ್ಯ : ಸಾರ್ವಜನಿಕರ ಆಕ್ರೋಶ

ಸಾವಳಗಿ : ಕಳೆದ ಎರಡು ಬಾರಿ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸಿದ್ದ ಸಾವಳಗಿ ಗ್ರಾಮದ ಜನತೆಯ ಈಗ ಮತ್ತೊಮ್ಮೆ ಘೋಷಣೆಗೊಂಡಿರುವ ಗ್ರಾ.ಪಂ ಚುನಾವಣೆ ಬಹಿಷ್ಕರಿಸಲು ತಿರ್ಮಾಣಿಸಿದ್ದಾರೆ ಎಂದು ಸಾರ್ವಜನಿಕರೇ ತಾಲ್ಲೂಕು ಹೋರಾಟ ಸಮಿತಿಯ ಮುಖಂಡರಿಗೆ ಮತ್ತು ಎಲ್ಲಾ ಪಕ್ಷದ ಮುಖಂಡರಿಗೆ  ಆಕ್ರೋಶ ಮಾಡಿದರು.

ನಿನ್ನೆ ನಡೆದ ಸಾವಳಗಿ ತಾಲ್ಲೂಕು ಹೋರಾಟ ಸಮಿತಿಯ ಸಭೆಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ಪಟ್ಟಣ ತಾಲ್ಲೂಕು ಮಾಡೋವರೆಗೂ ಚುನಾವಣೆ ಬಹಿಷ್ಕರಿಸುವುದಾಗಿ ಒಮ್ಮೆ ತಿರ್ಮಾನ ಮಾಡಲಾಗಿದೆ. ಒಂದು ವೇಳೆ ಚುನಾವಣೆ ಮಾಡಲು ಏನಾದರೂ ಪ್ರಯತ್ನಿಸಿದರೇ ಮುಂದಿನ ನಿರ್ಧಾರ ಉಗ್ರವಾಗಿರುತ್ತದೆ.

ಸರ್ಕಾರ ನೂತನವಾಗಿ ಘೋಷಣೆ ಮಾಡಿದ ತಾಲ್ಲೂಕು ಕೇಂದ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೇಂದ್ರಗಳು ನಿಯೋಜಿತ ಸಾವಳಗಿ ತಾಲ್ಲೂಕು ಕೇಂದ್ರಕ್ಕಿಂತ ಎಲ್ಲಾ ರೀತಿಯಲ್ಲಿ ಹಿಂದುಳಿದಿದ್ದರು ಇವತ್ತು ಅವುಗಳನ್ನು ಘೋಷಣೆ ಮಾಡಿದ್ದು ಮಾತ್ರ ತಮ್ಮ ರಾಜಕೀಯ ಇಚ್ಚಾಶಕ್ತಿಗೆ ಕಾರಣವಾಗಿದ್ದು ಇದರಿಂದ ನಮ್ಮ ಭಾಗದ ಜನತೆಗೆ ಮಲತಾಯಿ ಧೋರಣೆ ತೊರಿದಂತಾಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಳಿ ಮಾತನಾಡಿದರು ಸಾರ್ವಜನಿಕರ ನಿರ್ಣಯಕ್ಕೆ ಎಲ್ಲಾ ಪಕ್ಷದ ಮುಖಂಡರುಗಳು ಬದ್ಧರಾಗಿ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಬಹಿಷ್ಕರಿಸೋಣ ಎಂದರು.

ಈ ವೇಳೆ ಊರಿನ ಹಿರಿಯ ಸತಗೌಡ ನ್ಯಾಮಗೌಡ ಮಾತನಾಡಿ, ಸರ್ಕಾರ ಯಾವುದೇ ಇರಲಿ ಇವತ್ತು ಎಲ್ಲಾ ಪಕ್ಷಗಳು ಅಧಿಕಾರದಲ್ಲಿದ್ದಾಗ ಅನೇಕ ಹೋರಾಟದ ಮೂಲಕ ಮನವಿ ಮಾಡುತ್ತಾ ಬಂದಿದ್ದೆವೆ ಆದರೂ ನಮ್ಮ ಕಡೆ ಯಾವುದೇ ಪಕ್ಷದ ನಾಯಕರು ತಲೆ ಎತ್ತಿ ನೋಡುತ್ತಿಲ್ಲ ಇಷ್ಟು ದಿವಸ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೆವೆ ಇನ್ನೂ ಮುಂದೆಯೂ ಇದೇ ರೀತಿ ಒಗ್ಗಟ್ಟಿನಿಂದ ನಮ್ಮ ಹೋರಾಟ ಮುಂದುವರೆಸೋಣ ಸಾವಳಗಿ ತಾಲ್ಲೂಕು ಆಗೋವರೆಗೂ ಸಾರ್ವಜನಿಕ ಒತ್ತಾಯದಂತೆ ಚುನಾವಣೆಗಳನ್ನು ಬಹಿಷ್ಕರಿಸೋಣ ಎಂದರು ಇದರಲ್ಲಿ ಎಲ್ಲಾ ಪಕ್ಷದ ಮುಖಂಡರುಗಳು ನಿರ್ಣಯ ಘಟ್ಟಿಯಾಗಿದೆ ಎಂದರು.

ಇನ್ನೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ಮಾತನಾಡಿ, ಸಾರ್ವಜನಿಕ ಒತ್ತಾಯಿಂದ ಇವತ್ತು ಚುನಾವಣೆಯನ್ನು ಬಹಿಷ್ಕರಿಸಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಗ್ರಾಮದ ಅಭಿವೃದ್ಧಿಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಸಾರ್ವಜನಿಕ ಕೆಲಸಗಳನ್ನು ಊರಿನ ಹಿರಿಯರ ಒಗ್ಗೂಡಿಸಿಕೊಂಡು ಒಂದು ಸಮಿತಿ ಮಾಡಿ ಅದರಿಂದ ಎಲ್ಲಾ ಕೆಲಸಗಳನ್ನು ಮಾಡುವುದಾಗಿ ತಿಳಿಸಿದರು.

ಈ ವೇಳೆ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿ, ಡಿ. 13 ರಿಂದ 17 ರವರೆಗೆ ಗ್ರಾ. ಪಂ ಮುಂಭಾಗದ ಧರಣಿ ಸತ್ಯಾಗ್ರಹ ಮಾಡಿ ಡಿ. 17 ತಾರೀಖು ಸಾಯಂಕಾಲ 4 ಘಂಟೆಗೆ ಸಾವಳಗಿ ಯಿಂದ “ನಮ್ಮ ನಡೆಗೆ ಬೆಳಗಾವಿ ಅಧಿವೇಶನ ಕಡೆಗೆ” ಎಂಬ ಘೋಷ್ಯವಾಕ್ಯವನ್ನು ಇಟ್ಟುಕೊಂಡು ಬೆಳಗಾವಿಯ ಸುವರ್ಣ ಸೌಧದ ವರೆಗೆ ಪಾದಯಾತ್ರೆ ಮೂಲಕ ಹೋಗಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

Related