ಮಣ್ಣಿನಲ್ಲಿ ಇರುವ ಜೀವಸತ್ವ ಸಂರಕ್ಷಣೆ ಅಗತ್ಯ–ಡಾ. ಸವಿತಾ

ಮಣ್ಣಿನಲ್ಲಿ ಇರುವ ಜೀವಸತ್ವ ಸಂರಕ್ಷಣೆ ಅಗತ್ಯ–ಡಾ. ಸವಿತಾ

ಇಂಡಿ : ಮಣ್ಣಿನಲ್ಲಿ ಇರುವ ಜೀವ ಸತ್ವವನ್ನು ಸಂರಕ್ಷಿಸಿದರೆ ಜಗತ್ತಿನ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರ ಸಿಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಸವಿತಾ ಬಿ. ಹೇಳಿದರು.

ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಿAದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಣ್ಣಿನ ಲವಣಾಂಶವನ್ನುತಡೆಗಟ್ಟಿ, ಮಣ್ಣಿನ ಉತ್ಪಾದಕತೆ ಹೆಚ್ಚಿಸಿ ಎಂಬ ವಿಷಯದ ಮೇಲೆ ಮಾತನಾಡಿ, ಕ್ಷಾರಯುಕ್ತ ಮಣ್ಣು ಮತ್ತು ಅದರ ನಿರ್ವಹಣೆ ಮತ್ತು ಮಣ್ಣು ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಕುರಿತು ಹೇಳಿದರು.

ಈ ವೇಳೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಆರ್.ಬಿ ನೆಗಳೂರ ಮಾತನಾಡಿ, ಮಣ್ಣು ಆರೋಗ್ಯ ಚೀಟಿಯ ಮಹತ್ವದ ಬಗ್ಗೆ ವಿವರಿಸಿದರು. ಸಾಂಕೇತಿಕವಾಗಿ ಈ ಕಾರ್ಯಕ್ರಮದಲ್ಲಿ 50 ಜನ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಡಾ. ಸಂತೋಷ ಶಿಂದೆ, ಪ್ರಗತಿಪರ ರೈತ ಎಸ್.ಟಿ ಪಾಟೀಲ, ಡಾ. ಸೈಯದಾ ಸಮೀನಾ ಅಂಜುಮ, ರಾಜಶೇಖರ ನಿಂಬರಗಿ, ಮುದ್ದುಗೌಡ ಪಾಟೀಲ, ಪ್ರದೀಪಕುಮಾರ ಜಿ.ಟಿ, 95ಕ್ಕೂ ಹೆಚ್ಚು ಜನ ಆಸಕ್ತ ರೈತರು ಅನೇಕರು ಸೇರಿದಂತೆ ಇನ್ನಿತರರಿದ್ದರು.

Related