ಏಲಕ್ಕಿಯ ಆರೋಗ್ಯ ರಹಸ್ಯ

ಏಲಕ್ಕಿಯ ಆರೋಗ್ಯ ರಹಸ್ಯ

ಬೆಂಗಳೂರು: ಎಲ್ಲರ ಅಡುಗೆ ಮನೆಯಲ್ಲಿ ಸಿಗುವಂತಹ ಮಸಾಲೆ ಪದಾರ್ಥಗಳಲ್ಲೊಂದಾದ ಏಲಕ್ಕಿ. ಈ ಎಲಕ್ಕಿಯನು  ನಾವೇಲ್ಲರು ಹಲವಾರು ರೀತಿಯ ಅಡುಗೆಗಳಲ್ಲಿ ಬಳಸುತ್ತೆವೆ. ಪ್ರತಿನಿತ್ಯ ಅಡುಗೆಯಲ್ಲಿ ಅಥವಾ ತಿನ್ನುವುದರಿಂದ ಆಗುವಂತಹ ಪ್ರಯೋಜನಗಳನ್ನು ನಾವಿಂದು ತಿಳಿಯೋಣ

ಬಹುತೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಏಲಕ್ಕಿ ಇರಲೇಬೇಕು. ಇದರ ಹೊರತಾಗಿ, ಇದು ಕಫವನ್ನು ಕಡಿಮೆ ಮಾಡುವ ಮೂಲಕ ಉಸಿರಾಟದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ವಿಷಕಾರಿ ಮಾಲಿನ್ಯಕಾರಕಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸಹಾಯ ಮಾಡುತ್ತದೆ.

ಆಯುರ್ವೇದದ ಪ್ರಕಾರ, ಏಲಕ್ಕಿಯು ಕಫವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮ್ಯೂಕಸ್ ಅನ್ನು ಆರೋಗ್ಯಕರವಾಗಿಟ್ಟುಕೊಳ್ಳುತ್ತದೆ. ಏಲಕ್ಕಿಯು ಸಿನೋಲ್ ಎಂಬ ಸಕ್ರಿಯ ಘಟಕಾಂಶವನ್ನು ಹೊಂದಿದೆ.

ಇದು ಉಸಿರಾಟ ಮತ್ತು ಜೀರ್ಣಾಂಗ ವ್ಯವಸ್ಥೆಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ. ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಿಂದ ಬಳಲುತ್ತಿರುವ ಹಾಗೂ ಉರಿಯೂತದ ಕಾರಣ ಉಬ್ಬಿರುವ ಉಸಿರಾಟದ ಮಾರ್ಗಗಳನ್ನು ಹೊಂದಿರುವ ಅಸ್ತಮಾ ವ್ಯಕ್ತಿಗಳು ಏಲಕ್ಕಿ ಬಳಸುವುದು ಉತ್ತಮ. ಇದು ಶ್ವಾಸಕೋಶದ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವ ಬ್ಯಾಕ್ಟೀರಿಯಾದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಏಲಕ್ಕಿಯು ದೇಹದಲ್ಲಿನ ಉರಿಯೂತವನ್ನು ಸಹ ಕಡಿಮೆ ಮಾಡುತ್ತದೆ. ಈ ವೇಳೆ ಏಲಕ್ಕಿಯು ಅದನ್ನು ತಂಪಾಗಿಸುವ ಮತ್ತು ಉರಿಯನ್ನು ತಗ್ಗಿಸುವ ಕೆಲಸ ಮಾಡುತ್ತದೆ. ಏಲಕ್ಕಿಯು ಅಸಿಡಿಟಿಯನ್ನು ಎದುರಿಸಲು ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬುವುದು ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ನಿರ್ವಹಿಸಲು ಊಟದ ನಂತರದ ಪಾನೀಯವಾಗಿ ಇದನ್ನು ಬಳಸಲು ಉಪಯುಕ್ತ.

 

Related