ಟೀಕೆ ಮಾಡ್ದವ್ರೇ ನಮ್ಮ ಗ್ಯಾರಂಟಿ ಯೋಜನೆಗಳನ್ನ ಬಳಸುತ್ತಿದ್ದಾರೆ: ಮಧು ಬಂಗಾರಪ್ಪ

ಟೀಕೆ ಮಾಡ್ದವ್ರೇ ನಮ್ಮ ಗ್ಯಾರಂಟಿ ಯೋಜನೆಗಳನ್ನ ಬಳಸುತ್ತಿದ್ದಾರೆ: ಮಧು ಬಂಗಾರಪ್ಪ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದನ್ನು ಬಿಜೆಪಿ ಹಾಗೂ ಜೆಡಿಎಸ್ ಟೀಕೆ ಮಾಡಿದರು. ಆದರೀಗ ಟೀಕೆ ಮಾಡಿದವರೇ ನಮ್ಮ ಗ್ಯಾರಂಟಿಗಳನ್ನು ಬಳಸುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಟೀಕೆ ಮಾಡಿದ್ರು, ಆದರೆ ಈಗ ಬಿಜೆಪಿಯವರು ಮಾಡುತ್ತಿರುವುದು ಸರಿನಾ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಯವರು ಹಿಡಿದ ಛಲವನ್ನು ಬಿಡೋದಿಲ್ಲ. ಪಾರ್ಲಿಮೆಂಟ್ ನಲ್ಲಿ ಜಾತಿಗಣತಿ ಬಗ್ಗೆ ಹೇಳಿದ್ರು. ಈಗ ಜಾತಿಗಣತಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ರಾಹುಲ್ ಗಾಂಧಿ ಅವರ ಬೇಡಿಕೆ ಪರಿಗಣಿಸಿದ್ದಕ್ಕೆ ಮೋದಿ ಅವರಿಗೆ ಧನ್ಯವಾದ ತಿಳಿಸ್ತೀನಿ. ನಾವು ಜಾತಿಗಣತಿಯನ್ನು ಮಾಡಿದ್ದೀವಿ ಚರ್ಚೆಗೆ ಬಿಟ್ಟಿದ್ದೀ, ನೋಡೋಣ ಮುಂದೆ. ಇದನ್ನೂ ಓದಿ: ನಮಗೆ ಆನೇಕಲ್ ಬೇರೆಯಲ್ಲ ಕನಕಪುರ ಬೇರೆಯಲ್ಲ: ಡಿಕೆಶಿ

ಇದೀಗ ಕೇಂದ್ರ ಸರ್ಕಾರ ಸರ್ವೆಗೆ 500 ಕೋಟಿ ಇಟ್ಟಿದ್ದಾರೆ. ಅದು ಸಾಲಲ್ಲ ಇನ್ನು ಜಾಸ್ತಿ ಹಣ ಇಡಬೇಕಾಗುತ್ತೆ. ಟ್ಯಾಕ್ಸ್ ಕಲೆಕ್ಷನ್ ನಲ್ಲೂ ರಾಜ್ಯಗಳಿಗೆ ನ್ಯಾಯ ಕೊಡುವಂತಹ ಕೆಲಸವನ್ನು ಮೋದಿ ಮಾಡಬೇಕು. ಮೋದಿ ಅವರೇ ಸಿಎಂ ಆಗಿದ್ದಾಗ ರಾಜ್ಯಗಳ ಪಾಲಿನ ಬಗ್ಗೆ ಕೇಳಿದ್ದಾರೆ, ಸಾಕ್ಷಿ ಕೊಡ್ತೀನಿ. ಈಗ ಅವರು ಪ್ರಧಾನಮಂತ್ರಿ ಸ್ಥಾನದಲ್ಲಿ ಕೂತಿದ್ದಾರೆ ರಾಜ್ಯಗಳಿಗೆ ನ್ಯಾಯ ಕೊಡಬೇಕು ಎಂದರು.

 

Related