ಧಗಧಗನೇ ಹೊತ್ತಿ ಉರಿದ ಬಿಎಂಟಿಸಿ

ಧಗಧಗನೇ ಹೊತ್ತಿ ಉರಿದ ಬಿಎಂಟಿಸಿ

ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ ಗಳಿಂದ ಒಂದಲ್ಲ ಒಂದು ಅನಾಹುತಗಳು ಆಗುತ್ತಲೇ ಇರುತ್ತವೆ. ಅದರಂತೆ ನಗರದಲ್ಲಿಂದು ಬಿಎಂಟಿಸಿ ಬಸ್ ಒಂದು ಇದ್ದುಕ್ಕಿದ್ದಂಗೆ ಬೆಂಕಿಗೆ ಆಹುತಿಯಾಗಿದೆ.

ಹೌದು, ಇಂದು (ಮಂಗಳವಾರ ಜುಲೈ 09) ಬೆಳಗ್ಗೆ 8:50ರ ಸಮಾರಿಗೆ ನಗರದ ಎಂ.ಜಿ ರೋಡ್‌ ಅನಿಲ್ ಕುಂಬ್ಳೆ ಸರ್ಕಲ್ ಬಳಿ 144ಈ ಮಾರ್ಗದ ಬಿಎಂಟಿಸಿ ಬಸ್‌ವೊಂದು ದಿಢೀರ್ ಅಗ್ನಿಗೆ ಆಹುತಿಯಾಗಿದೆ. ಇದನ್ನೂ ಓದಿ: ಸೆಂಚುರಿ ಸ್ಟಾರ್ ಶಿವಣ್ಣನ ಲುಕ್ಕಿಗೆ ಅಭಿಮಾನಿಗಳು ಫುಲ್ ಫಿದಾ..!

ಅದೃಶ್ಯಾವಶಾತ್ ಬಿಎಂಟಿಸಿ ಬಸ್ಸಲ್ಲಿದ್ದ 30 ಜನಗಳಿಗೆ ಯಾವುದೇ ಪ್ರಾಣಿ ಹಾನಿಯಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ

ಇನ್ನು ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲಾ ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಿದ ಚಾಲಕ ಮತ್ತು ನಿರ್ವಾಹಕ, ತಕ್ಷಣವೇ ಸ್ಥಳದಿಂದ ದೂರ ಓಡಿದ್ದಾರೆ. ಕ್ಷಣಮಾತ್ರದಲ್ಲಿ ಬಸ್ ಧಗಧಗನೆ ಹೊತ್ತಿ ಉರಿದಿದೆ.

Related