ಏಕ್ ಲವ್ ಯಾ ಚಿತ್ರದ ಟೀಸರ್ ಬಿಡುಗಡೆ

  • In Cinema
  • February 14, 2020
  • 450 Views
ಏಕ್ ಲವ್ ಯಾ ಚಿತ್ರದ ಟೀಸರ್ ಬಿಡುಗಡೆ

ಬೆಂಗಳೂರು, ಫೆ. 14: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾಗಿಂತ ಇನ್ನೊಂದು ಸಿನಿಮಾ ವಿಭಿನ್ನವಾಗಿ ಮೂಡಿ ಬರುತ್ತಿದ್ದಾವೆ. ಹೌದು ಕನ್ನಡ ಚಿತ್ರರಂಗ ಯಾವ ಚಿತ್ರರಂಗಕ್ಕೆನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದೆ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ‘ಏಕ್ ಲವ್ ಯಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೆಚ್ಚು ಪ್ರೀತಿ ಪ್ರೇಮದ ವಿಚಾರ, ಒಂದಷ್ಟು ಆ್ಯಕ್ಷನ್ ಹೀಗೆ ಹಲವು ವಿಚಾರಗಳನ್ನು ಟೀಸರ್ನಲ್ಲಿ ಇಟ್ಟಿದ್ದಾರೆ ನಿರ್ದೇಶಕ ಪ್ರೇಮ್.

ರಕ್ಷಿತಾ ಪ್ರೇಮ್ ಸಹೋದರ ರಾಣಾ ಅಭಿನಯದ ‘ಏಕ್ ಲವ್ ಯಾ’ ಚಿತ್ರದಲ್ಲಿ ರಚಿತಾ  ಮತ್ತು ಕೊಡಗಿನ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಇಬ್ಬರೂ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ.

‘ಏಕ್ ಲವ್ ಯಾ’ ಶೀರ್ಷಿಕೆ ಮೂಲಕವೇ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲವೂ ಪ್ರೇಕ್ಷಕರಲ್ಲಿತ್ತು. ಈಗ ಟೀಸರ್ ಮೂಲಕ ಒಂದಷ್ಟು ವಿಚಾರಗಳನ್ನು ಬಿಟ್ಟುಕೊಡಲಾಗಿದೆ.

ಪ್ರೇಮ್ ಸಿನಿಮಾ ಎಂದರೆ ಅಲ್ಲಿ ಪ್ರೀತಿ ಪ್ರೇಮದ ವಿಚಾರ ಇರುತ್ತದೆ. ಆದರೆ, ‘ಏಕ್ ಲವ್ ಯಾ’ದಲ್ಲಿ ತುಸು ಹೆಚ್ಚಾಗೇ ಹೇಳಿದಂತೆ ಕಾಣುತ್ತಿದೆ. ಈ ಮೂಲಕ ಬಾಮೈದನ ಸಿನಿಮಾ ಕರಿಯರ್ಗೆ ಒಂದೊಳ್ಳೆಯ ಆರಂಭಕೊಡಲು ಪ್ರೇಮ್ ಸಿದ್ಧರಾಗಿದ್ದಾರೆ.

Related