ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಮೂಡಿ ಬರುತ್ತಿರುವ ಸಿನಿಮಾಗಳೆಲ್ಲ ಇಡೀ ದೇಶದಾದ್ಯಂತ ಹೆಸರು ಮಾಡುತ್ತಿದ್ದು ಅದರ ಸಾಲಿಗೆ ಇದೀಗ ತಾಯವ್ವ ಚಿತ್ರ ಕೂಡ ಒಂದಾಗಿದೆ.
ಹೌದು, ವಿಭಿನ್ನ ಕಥಾ ಹಂದರವನ್ನು ಹೊತ್ತು ಬರುತ್ತಿರುವ ತಾಯವ್ವ ಚಿತ್ರದ ಟೈಟಲ್ ಬಿಡುಗಡೆ ಮಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ತಾಯವ್ವ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ತಾಯವ್ವ ಟೈಟಲ್ ಲಾಂಚ್ ಕಾರ್ಯಕ್ರಮವನ್ನು (ಮಂಗಳವಾರ ಡಿ 03) ರಂದು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಆರ್.ಅಶೋಕ್ ಹಾಗೂ ಉಮಾಶ್ರೀ ಟೈಟಲ್ ಲಾಂಚ್ ಮಾಡಿ ಹೊಸತಂಡಕ್ಕೆ ಶುಭ ಹಾರೈಸಿದರು.
ಟೈಟಲ್ ಲಾಂಚ್ ಮಾಡಿ ಮಾತನಾಡಿದ ಆರ್.ಅಶೋಕ್, ತಾಯವ್ವ ಮನಸ್ಸಿಗೆ ಮುಟ್ಟುವ ಪದ. ತಾಯಿ ಅನ್ನೋ ಪದವೇ ಹಾಗೇ. ವಿಶೇಷವಾಗಿ ಹೆಣ್ಣು ಮಕ್ಕಳ ಬಗ್ಗೆ ತಯಾರಾಗಿರುವ ಸಿನಿಮಾ ಇದಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅಧಿವೇಶನದ ಬಳಿಕ ಪೌರಕಾರ್ಮಿಕರ ಸಮಸ್ಯೆಗೆ ಪರಿಹಾರ: ಡಿಸಿಎಂ
ಇನ್ನು ಹಿರಿಯ ನಟಿ ಉಮಾಶ್ರೀ ಮಾತನಾಡಿ, ಸುದೀಪ್ ಮೊದಲ ಸಿನಿಮಾ ತಾಯವ್ವ ಅನ್ನೋ ಟೈಟಲ್ ಮೇಲೆಯೇ ಆಗಿದ್ದು, ನಾನು ಆ ಚಿತ್ರದಲ್ಲಿ ಅಜ್ಜಿ ಅಥವಾ ತಾಯಿ ಪಾತ್ರ ಮಾಡಿದ್ದೆ. ಅದೇ ಟೈಟಲ್ ಈಗ ಕನ್ನಡ ಚಿತ್ರರಂಗದಲ್ಲಿ ರೀಪೀಟ್ ಆಗ್ತಿದೆ. ಭಾ.ಮ ಹರೀಶ್ ಬಹಳ ಒಳ್ಳೆ ಪ್ರಯತ್ನ ಮಾಡಿದ್ದಾರೆ. ಮಕ್ಕಳು, ಮಹಿಳೆಯರಿಗಾಗಿ ಮಾಡುತ್ತಿರುವ ಪ್ರಯತ್ನ. ವಿಧಾನಸಭೆಗಳಲ್ಲಿ ಮಾತನಾಡುತ್ತೇವೆ ಹೆಣ್ಣು ಭ್ರೂಣ ಹತ್ಯೆ, ಸಮಾಜದಲ್ಲಿರುವ ಮನಸ್ಥಿತಿ ಬಗ್ಗೆ ಮಾತನಾಡುತ್ತೇನೆ. ಸಮಾಜಕ್ಕೆ ಅರಿವು ಮೂಡಿಸುವಂತಹ ಇಂತಹ ಸಿನಿಮಾಗಳು ಬಹಳ ಮುಖ್ಯವಾಗುತ್ತವೆ ಎಂದು ಹೇಳಿದರು.