ಎರಡು ಫಾರ್ಮ್‌ಗಳಲ್ಲಿ ಹಂದಿಜ್ವರ

ಎರಡು ಫಾರ್ಮ್‌ಗಳಲ್ಲಿ ಹಂದಿಜ್ವರ

ವಯನಾಡ್, ಜುಲೈ 23: ಕೇರಳದ ವಯನಾಡ್ ಜಿಲ್ಲೆಯ ಎರಡು ಫಾರ್ಮ್‌ಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾದ ಬೆನ್ನಲ್ಲೇ, ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. ಈ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಮುಂದಾಗಿದೆ.

ರಾಜ್ಯದಲ್ಲಿ ಹಂದಿಜ್ವರದ ಸೋಂಕಿನ ಬಗ್ಗೆ ಕೇರಳದ ಪಶುಸಂಗೋಪನಾ ಸಚಿವ ಜೆ ಚಿಂಚು ರಾಣಿ ದೃಢಪಡಿಸಿದ್ದಾರೆ. ಹಂದಿ ಜ್ವರದ ಕ್ರಿಯಾ ಯೋಜನೆಯ ಭಾಗವಾಗಿ ಜೈವಿಕ ಭದ್ರತೆ ಮತ್ತು ತ್ಯಾಜ್ಯ ವಿಲೇವಾರಿ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಂದಿ ಸಾಕಣೆ ಕೇಂದ್ರಗಳಿಗೆ ನಿರ್ದೇಶನ ನೀಡಿದ್ದಾರೆ.

ಶುಕ್ರವಾರ ಈ ಕುರಿತು ಮಾತನಾಡಿದ ಸಚಿವರು, “ವಯನಾಡ್ ಜಿಲ್ಲೆಯ ಮನಂತವಾಡಿ ಪ್ರದೇಶದಲ್ಲಿ ಇರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಈ ರೋಗವನ್ನು ಐಸಿಎಆರ್ ಸಂಬಂಧಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ (NIHSAD) ದೃಢಪಡಿಸಿದೆ

ಕೇರಳದಲ್ಲಿ ಹಂದಿಜ್ವರದಿಂದ 44 ಹಂದಿ ಸಾವು “ಕೇರಳದ ವಯನಾಡ್ ಜಿಲ್ಲೆಯ ಮಾನಂತವಾಡಿ ಫಾರ್ಮ್‌ನಲ್ಲಿ 43 ಹಂದಿಗಳು ಮತ್ತು ತಾವಿನ್ಹಾಳ್ ಪಂಚಾಯಿತಿಯ ಜಮೀನಿನಲ್ಲಿ ಒಂದು ಹಂದಿ ಸಾವನ್ನಪ್ಪಿವೆ. ಪಂಚಾಯಿತಿಯ ಜಮೀನಿನಲ್ಲಿ 300 ಹಂದಿಗಳಿವೆ. ಪ್ರಸ್ತುತ, ಮೂರು ಪ್ರಾಣಿಗಳು ಅನಾರೋಗ್ಯದ ಲಕ್ಷಣಗಳನ್ನು ತೋರಿಸುತ್ತಿವೆ. ಕಳೆದ ಜುಲೈ 19, 2022 ರಂದು, ಪಶುಸಂಗೋಪನಾ ಇಲಾಖೆಯ ಅಡಿಯಲ್ಲಿ ವಿವಿಧ ವಿಭಾಗಗಳ ತಜ್ಞರ ಸಭೆಯನ್ನು ನಡೆಸಲಾಯಿತು. ನಾವು ರೋಗವನ್ನು ನಿಯಂತ್ರಣಕ್ಕೆ ಸಂಬಂಧಿಸಿದ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Related