ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಭಿಗಳಾಗಿ

ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಭಿಗಳಾಗಿ

ರೋಣ : ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಭಿಗಳಾಗಿ ಅಭಿವೃದ್ದಿ ಜೀವನ ನಡೆಸಿ ಎಂದು ಮಾಜಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಮಳಿಗೆಯಲ್ಲಿ ನೂತನ ಬೀದಿ ಬದಿ ವ್ಯಾಪಾರಸ್ಥರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಕೋವಿಡ್ ಲಾಕ್‌ಡೌನ್‌ನಿಂದ ಅನೇಕ ವ್ಯಾಪಾರಿಗಳು ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ತಮಗೆ ಸಹಾಯವಾಗುವ ನಿಟ್ಟಿನಲ್ಲಿ ಉಳಿತಾಯ ಮನೋಭಾವ ಬೆಳಿಸಿಕೊಳ್ಳಿ ಎಂದು ಬೀದಿ ಬದಿ ವ್ಯಾಪಾರಿಗಳಿಗೆ ಕಿವಿಮಾತು ಹೇಳಿದರು.

1 ಲಕ್ಷ ರೂಪಾಯಿ ಸಹಾಯ ಧನ ನಿಮ್ಮ ಸಂಘಕ್ಕೆ ನೀಡುತ್ತೇನೆ. ಅದೇ ರೀತಿ ನೀವು ಪ್ರತಿಯೊಬ್ಬರು ಸ್ವಲ್ಪ ಮಟ್ಟಿನ ಹಣ ಸೇರಿಸಿ, ಆರ್ಥಿಕ ಸಂಕಷ್ಟದಲ್ಲಿರುವ ವ್ಯಾಪಾರಸ್ಥರಿಗೆ ನೀಡಿ, ಅವರ ಆ ಮೂಲಕ ವ್ಯವಹಾರ ಮಾಡಿ ಲಾಭ ಪಡೆಯುವುದರ ಜೊತೆಗೆ ನಿಮ್ಮ ಹಣ ಮರಳಿಸುತ್ತಾರೆ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವರ ಶಿರಹಟ್ಟಿ, ಸಂಘಟನಾ ಕಾರ್ಯದರ್ಶಿ ಬಾಷೇಸಾಬ್ ಕರ್ನಾಚಿ, ರಾಜೇಸಾಬ್ ಜಲಾವರ, ದಾವಲಸಾಬ್ ಬದಾಮಿ, ಬಾವಾಸಾಬ್ ಬೇಟಗೇರಿ, ಅಕ್ಷಯ ಪಾಟೀಲ ಸೇರಿ ಹಲವರು ಇದ್ದರು.

Related