ಬಿಜೆಪಿ ಪ್ರಚಾರ ಮೇಲೆ ಕಲ್ಲು ತೂರಾಟ

ಬಿಜೆಪಿ ಪ್ರಚಾರ ಮೇಲೆ ಕಲ್ಲು ತೂರಾಟ

ಮೈಸೂರು: ಮೈಸೂರಿನಲ್ಲಿಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾದ ವಿ ಸೋಮಣ್ಣನ ಪ್ರಚಾರ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದ್ದು, ಈ ಸಂದರ್ಭದಲ್ಲಿ ಸೋಮಣ್ಣ ಮತ್ತು ಪ್ರತಾಪ್ ಸಿಂಹ ಇರುವಂತಹ ರಥದ ಮೇಲೆ ಕಲ್ಲುತೂರಾಟ ಮಾಡಿರುವ ಘಟನೆ ನಡೆದಿದೆ.

ಈ ವೇಳೆ ರಥದ ಮೇಲಿದ್ದ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವರಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಚಿವ ವಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲವು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

 

Related