ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆಯನ್ನು ಸರ್ಕಾರ ಮನಗಂಡಿದೆ: ಸಿಎಂ

ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆಯನ್ನು ಸರ್ಕಾರ ಮನಗಂಡಿದೆ: ಸಿಎಂ

ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಗು ಉದ್ಯೋಗ ಭಾರತೀ, ಕರ್ನಾಟಕ ಇವರ ವತಿಯಿಂದ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ – 2022 ನ್ನು ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆಯನ್ನು ಸರ್ಕಾರ ಮನಗಂಡಿದೆ. ಸರ್ಕಾರ ಕೈಗಾರಿಕಾ ಸ್ನೇಹಿಯಾದ ನೀತಿಗಳು, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಎಬಿಸಿ ಪಾಲಿಸಿ, ಮುಂದಿನ ಐದು ವರ್ಷಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚಿನ ಪ್ರಾಶಸ್ಯ ನೀಡಲಾಗಿದೆ. ಚೆನ್ನೈ ಬಾಂಬೆ ಕಾರಿಡಾರ್ ನಲ್ಲಿ ಕೈಗಾರಿಕಾ ಟೌನ್, ತುಮಕೂರು, ಚಿತ್ರದುರ್ಗ, ಹಾವೇರಿ, ಧಾರವಾಡ, ಬೆಳಗಾವಿಗಳಲ್ಲಿ ಕೈಗಾರಿಕಾ ಅಭಿವೃದ್ಧಿ. ಗುಲ್ಬರ್ಗಾ, ಯಾದಗಿರಿ, ಮೈಸೂರುಗಳಲ್ಲಿ ಕೈಗಾರಿಕಾ ಪಾಕ್‌ರ್ಗಳ ಸ್ಥಾಪನೆ.

ಬೆಂಗಳೂರಿನಲ್ಲಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಆಗುತ್ತಿದೆ. 400 ಅಂತರರಾಷ್ಟ್ರೀಯ ಮಟ್ಟದ ಆರ್‌ಎಂಡ್‌ಡಿ ಕೇಂದ್ರಗಳಿವೆ. 400 ಫಾರ್ಚುನ್ ಕಂಪನಿಗಳು ಬೆಂಗಳೂರಿನಲ್ಲಿವೆ. ಇಲ್ಲಿನ ಎಕೋಸಿಸ್ಟಂ ಅತ್ಯುತ್ತಮವಾಗಿದೆ. ರಾಜ್ಯದಲ್ಲಿ ಸಂಶೋಧನಾ ನೀತಿಯಿದ್ದು, ಯಾವುದೇ ಸಂಶೋಧನಾ ಕಾರ್ಯಗಳಿಗೆ ಉತ್ತೇಜನ ನೀಡಲಾಗುತ್ತದೆ. ವಿಜ್ಞಾನವನ್ನು ಸಾಮಾನ್ಯ ನಾಗರಿಕನೂ ಬಳಸುವಂತಾಗ ಮಾತ್ರ ವಿಜ್ಞಾನದ ಮಹತ್ವ ಹೆಚ್ಚುತ್ತದೆ. ಸೆಮಿಕಂಡಕ್ಟರ್ ನೀತಿ, ಆರ್ ಎಂಡ್ ಡಿ ನೀತಿ, ಉದ್ಯೋಗ ನೀತಿಗಳು ರಾಜ್ಯದಲ್ಲಿದೆ. ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಲಘು ಉದ್ಯೋಗ ಭಾರತಿ ಸಂಸ್ಥೆಯ ಸಚಿನ್ ಸಬನೀಸ್, ಕೃಷ್ಣ, ಅರುಣ್ ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.

Related