45ನೇ ವಯಸ್ಸಿನಲ್ಲಿ SSLC ಉತ್ತೀರ್ಣರಾದ ಬಟ್ಟೆ ವ್ಯಾಪಾರಿ..!!

  • In State
  • May 27, 2022
  • 436 Views
45ನೇ ವಯಸ್ಸಿನಲ್ಲಿ SSLC ಉತ್ತೀರ್ಣರಾದ ಬಟ್ಟೆ ವ್ಯಾಪಾರಿ..!!

ರಹಮತುಲ್ಲಾ1993ರಲ್ಲಿ 9ನೇತರಗತಿ ವರೆಗೂ ಓದಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಓದಿನ ಬಗ್ಗೆ ಆಸಕ್ತಿ ಇದ್ದರೂ ಸೂಕ್ತ ಮಾರ್ಗದರ್ಶನವಿಲ್ಲದೆ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ತಂದೆಯ ಓದಿನ ಆಸಕ್ತಿ ಗಮನಿಸಿದ್ದ ಮಗ ಮಹಮದ್ ಫರಾನ್ ಈ ಬಾರಿ ತನ್ನೊಂದಿಗೆ ತಂದೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತಯಾರಾಗುವಂತೆ ಮಾಡಿದ್ದಾನೆ. ಪ್ರತಿನಿತ್ಯ ತಂದೆ ಮಗ ಒಟ್ಟಿಗೆ ಕೂತು ಅಭ್ಯಾಸ ಮಾಡಿದ್ದಾರೆ. ತಾನು ತರಗತಿಯಲ್ಲಿ ಕಲಿತ ಪಾಠವನ್ನು ಫರಾನ್ ಮನೆಯಲ್ಲಿ ತಂದೆಗೆ ಭೋದಿಸಿದ್ದಾನೆ. ತಂದೆಯೂ ಅಷ್ಟೇ ಶ್ರದ್ಧೆಯಿಂದ ಮಗ ಹೇಳಿಕೊಟ್ಟ ವಿಚಾರಗಳನ್ನು ಕಲಿತುಕೊಂಡಿದ್ದಾರೆ.

ಒಟ್ಟಾರೆ ಹಗಲು ದುಡಿದು ರಾತ್ರಿ ಮಗನ ಪಾಠ ಕೇಳಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದ ರಹಮತುಲ್ಲಾ 333 ಅಂಕ ಗಳಿಸಿದ್ದಾರೆ. ಇತ್ತ ತಂದೆಗೆ ಪಾಠ ಮಾಡುತ್ತಾ ತಾನೂ ಪರೀಕ್ಷೆಗೆ ತಯಾರಾಗಿದ್ದ ಫರಾನ್ 625ರಲ್ಲಿ 619 ಅಂಕ ಪಡೆದಿದ್ದಾನೆ.

ಕುಟುಂಬ ನಿರ್ವಹಣೆ ಕೆಲಸದ ಒತ್ತಡದಲ್ಲಿರುವ ತಂದೆಗೆ ಮಾನಸಿಕವಾಗಿ ಧೈರ್ಯತುಂಬಿ ಪರೀಕ್ಷೆಗೆ ಸಜ್ಜುಗೊಳಿಸಿದ ಮಗನ ಪ್ರೋತ್ಸಾಹ ಹಾಗೂ ಶಿಕ್ಷಣದ ಮಹತ್ವ ಅರಿತು ಮಗನ ಮಾತಿಗೆ ಒಪ್ಪಿ ಪರೀಕ್ಷೆಯಲ್ಲಿ ಪಾಸಾದ ತಂದೆಯ ಶ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ರಹಮತುಲ್ಲಾ ಮಗ ನೀಡಿದ ಪ್ರೋತ್ಸಾಹದಿಂದ ವಿದ್ಯಾಭ್ಯಾಸ ಮುಂದುವರಿಸುವ ಹಂಬಲ ವ್ಯಕ್ತಪಡಿಸಿದ್ದಾರೆ.

Related