ಬೆಂಗಳೂರು: ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಆರು ವಾರಗಳ ಕಾಲ ಮಧ್ಯಂತರ ಷರತ್ತುಬದ್ಧ ಜಾಮೀನು ಕರ್ನಾಟಕ ಹೈಕೋರ್ಟ್ ಜಾರಿ ಮಾಡಿದ್ದು, ನಿನ್ನೆ (ಬುಧವಾರ ಅಕ್ಟೋಬರ್ 30) ರಂದು ರಾತ್ರಿ ತಮ್ಮ ಮನೆ ಸೇರಿದ್ದಾರೆ.
ಇನ್ನು ಬಳ್ಳಾರಿ ಜೈಲಿನಲ್ಲಿ ಸುಮಾರು ಎರಡು ತಿಂಗಳು ಸೆರೆವಾಸ ಅನುಭವಿಸಿದ ನಟ ದರ್ಶನ್ ಅವರು ಇದೀಗ ಬಳ್ಳಾರಿ ಜೈಲ್ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರದಾಡುತ್ತಿದೆ.
ನಾನು ಬಳ್ಳಾರಿ ಜೈಲ್ ನಲ್ಲಿ ಇದ್ದಾಗ ನನಗೆ ಅದು ಬೇಕು ಇದು ಬೇಕು ಎಂದು ಕೇಳುವ ಮೂಲಕ ಜೈಲು ಸಿಬ್ಬಂದಿಗಳಿಗೂ ಹಾಗೂ ಇನ್ನಿತರರಿಗೆ ನಾನು ತೊಂದರೆ ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ದರ್ಶನ್ ಅವರು ಬಳ್ಳಾರಿ ಜೈಲ್ ಅಧಿಕಾರಿಗಳಿಗೆ ಕ್ಷಮೆ ಕೇಳಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿತ್ತಿದೆ. ಇದನ್ನೂ ಓದಿ: ದರ್ಶನ್ ಗೆ ಜಾಮೀನು ಮಂಜೂರು, ಪತ್ನಿ ಹೇಳಿದ್ದೇನು?
ಹೌದು, ಬಳ್ಳಾರಿ ಜೈಲಿನಲ್ಲಿ ದರ್ಶನ್ 2 ತಿಂಗಳು ಇದ್ದರು. ಈಗ ದರ್ಶನ್ ಅವರು ಜೈಲಿನಲ್ಲಿದ್ದ ಸಿಬ್ಬಂದಿಗೆ ಕ್ಷಮೆ ಕೇಳಿದ್ದಾರೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ದರ್ಶನ್ ಕೇಳಿರುವುದಾಗಿ ವರದಿ ಆಗಿದೆ.
ಪದೇ ಪದೇ ಅದು ಬೇಕು, ಇದು ಬೇಕು ಎಂದು ಕೇಳುತ್ತಿದ್ದೆ. ನಿಮಗೆ ತೊಂದರೆ ಕೊಟ್ಟಿದ್ದೇನೆ ಕ್ಷಮಿಸಿ ಎಂದು ದರ್ಶನ್ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹೈ ಸೆಕ್ಯುರಿಟಿ ಸೆಲ್‌ನ ಸಿಬ್ಬಂದಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಇನ್ನು ಸಿಬ್ಬಂದಿಗಳೂ ದರ್ಶನ್ಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ‘ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ, ಆರೋಗ್ಯದ ಬಗ್ಗೆ ಗಮನ ಕೊಡಿ’ ಎಂದು ಜೈಲು ಸಿಬ್ಬಂದಿ ಕೇಳಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಐದು ತಿಂಗಳು ಜೈಲು ಸೇರೆವಾಸ ಅನುಭವಿಸಿ ಇದೀಗ ಜೈಲಿನಿಂದ ಹೊರ ಬಂದಿರುವ ನಟ ದರ್ಶನ್ ಅವರಿಗೆ ಅವರ ಅಭಿಮಾನಿಗಳು ಹಾಗೂ ಪತ್ನಿ ವಿಜಯಲಕ್ಷ್ಮಿ ಅವರು ದೇವರಲ್ಲಿ ಸಲ್ಲಿಸಿದ ಪ್ರಾರ್ಥನೆ ಇದೀಗ ಫಲಿಸಿದ್ದು ದರ್ಶನ್ ಅವರು ಆರು ವಾರಗಳ ಕಾಲ ತಮ್ಮ ಕುಟುಂಬದ ಜೊತೆ ಕಾಲ ಕಳೆಯುವಂತಾಗಿದೆ.