ಹೊರಗಡೆ ಪಂಚರ್ ಅಂಗಡಿ, ಒಳಗಡೆ ಸ್ಮಗ್ಲಿಂಗ್, 1 ವರ್ಷಕ್ಕೆ 7.15 ಕೋಟಿ ರೂ. ಲಾಭ

  • In Crime
  • May 23, 2022
  • 304 Views

ಒಂದು ಸಣ್ಣ ಪಂಚರ್ ಅಂಗಡಿ ಮಾಲೀಕ ಇಸ್ಲಾಮ್ ಖಾನ್. 2021ರ ವರೆಗೆ ಎಲ್ಲವೂ ಒಕೆ. ಆದರೆ 2022ರ ವೇಳೆಗೆ ಇಸ್ಲಾಮ್ ಖಾನ್ ಪಂಚರ್ ಅಂಗಡಿ ಹೆಸರಿಗೆ ಮಾತ್ರ. ಒಳಗಿಂದ ಭಾರಿ ಸ್ಲಗ್ಲಿಂಗ್ ವ್ಯವಾಹರ. ಈತನ ಅವ್ಯವಹಾರದ ಸುಳಿವು ಪಡೆದ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ. ಈ ಮೂಲಕ ಇಸ್ಲಾಮ್ ಖಾನ್ ಪಂಚರ್ ಅಂಗಡಿ ಅಸಲಿಯತ್ತು ಬಹಿರಂಗವಾಗಿದೆ.


ಉತ್ತರ ಪ್ರದೇಶದ ಬರೇಲಿಯಲ್ಲಿ ಪಂಚರ್ ಅಂಗಡಿ ಇಟ್ಟಿರುವ ಇಸ್ಲಾಮ್ ಖಾನ್, ಕಳೆದ ಒಂದು ವರ್ಷದಲ್ಲಿ ಗಳಿಸಿದ ಆದಾಯ ಬರೋಬ್ಬರಿ 7.15 ಕೋಟಿ ರೂಪಾಯಿ. ಪತ್ನಿ, ಮಕ್ಕಳು ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ. ಇಷ್ಟೇ ಅಲ್ಲ ಅನಾಮಧೇಯನ ಹೆಸರಿನಲ್ಲಿ ಬೈಕ್ ಶೋ ರೂಂ, ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಟ್ಟಡಗಳು ಇವೆ. ಈತನ ವ್ಯವಹಾರದ ಕುರಿತು ಅನುಮಾನ ಪಟ್ಟ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಈ ವೇಳೆ ಉತ್ತರ ಪ್ರದೇಶ ಪೊಲೀಸರಿಗೆ ಮಾದಕ್ ದ್ರವ್ಯ ಮಾರಾಟ ವಾಸನೆಯೂ ಬಡಿದಿತ್ತು.ಮಾದಕ ದ್ರವ್ಯ ಖರೀದಿ ನೆಪದಲ್ಲಿ ಈತನ ಸಂಗ ಬೆಳೆದಿಸಿ ತನಿಖಾ ತಂಡ ಕಳೆದ ಕೆಲ ತಿಂಗಳುಗಳಿಂದ ಡೀಲಿಂಗ್ ನಡೆಸುವ ನಾಟಕವಾಡಿದ್ದು. ಕೊನೆಗೆ ಪೊಲೀಸರ ಬಲೆಗೆ ಬಿದ್ದ ಇಸ್ಲಾಮ್ ಕಾನ್ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಗ್ಯಾಂಗ್‌ಸ್ಟರ್ ಆ್ಯಕ್ಟ್ ಅಡಿಯಲ್ಲಿ ಇಸ್ಲಾಮ್ ಖಾನ್ ಮೇಲೆ ಪ್ರಕರಣ ದಾಖಲಾಗಿದೆ.

Related