ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು, ಇಂದು ವಿಧಾನಸೌಧದಲ್ಲಿ ವಿಧಾನಪರಿಷ ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಇನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಇಂದು ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜೊತೆಗಿದ್ದರು.
ತದನಂತರ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಅವರು, ನಮ್ಮ ಕುಟುಂಬವನ್ನು ಹಾಳು ಮಾಡಲು ಡಿಕೆ ಶಿವಕುಮಾರ್ ಅವರೇ, ಶತ್ರು ಭೈರವಿ ಯಾಗದ ಪರಿಕಲ್ಪನೆಯನ್ನು ಮಾಡಲು ಮುಂದಾಗಿದ್ದಾರೆ. ಇದರಿಂದ ನಮ್ಮ ಕುಟುಂಬದವರನ್ನು ಯಾವುದೇ ಕಾರಣಕ್ಕೂ ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲವೆಂದು ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ಇದನ್ನೂ ಓದಿ:ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಿಗಿ ಭದ್ರತೆ
ಒಬ್ಬ ರಾಜ್ಯದ ಮುಖ್ಯಮಂತ್ರಿ ಹೀಗೆ ಕತೆಗಳನ್ನು ಕಟ್ಟುತ್ತಾರೆಂದರೆ, ಅವರಿಗೆ ತಮ್ಮ ಸ್ಥಾನದ ಘನತೆಯ ಬಗ್ಗೆ ಕಿಂಚಿತ್ತೂ ಕೂಡ ಗೌರವವಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಾನು ಸಹ ಪೂಜೆ ಸಲ್ಲಿಸಿದ್ದೇನೆಂದು ಹೇಳುವ ಶಿವಕುಮಾರ್ ಗೆ ಅಲ್ಲಿ ಪೂಜಾ ವಿಧಿಗಳು ಹೇಗೆ ನಡೆಯುತ್ತವೆ ಅಂತ ಗೊತ್ತಿಲ್ಲವೇ? ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅವರು ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಹಾಡನ್ನು ಉಲ್ಲೇಖಿಸಿದರು ಮತ್ತು ಹಿಂದೊಮ್ಮೆ ಶಿವಕುಮಾರ್ ಅವರು ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯವರ ದುಃಖಕ್ಕೆ ಅಳುವವವರ ಮೆಚ್ಚ ಕೂಡಲಸಂಗಮದೇವ ಅಂತ ಬಸವಣ್ಣನವರ ವಚನ ಹೇಳಿದ್ದನ್ನು ಪ್ರಸ್ತಾಪಿಸಿ, ಇದನ್ನು ತಾನು ಶಿವಕುಮಾರ್ ಅವರಿಗೆ ಹೇಳಬೇಕಿದೆ, ಅವರು ಬೇರೆಯವರ ಡೊಂಕು ತಿದ್ದುವ ಪ್ರಯತ್ನಕ್ಕಿಳಿಯದೆ ತಮ್ಮ ಡೊಂಕುಗಳನ್ನು ತಿದ್ದಿಕೊಳ್ಳಲಿ ಎಂದರು.