ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಸಿಎಂ

ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಸಿಎಂ

ಬೆಂಗಳೂರು: ನಿನ್ನೆ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಅವರು ಇಂದು ತಮ್ಮ ನಿವಾಸದ  ಬಳಿ   ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ  ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ  ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

ಸಿದ್ದೇಶ್ವರ ಶ್ರೀಗಳು ಒಂದು ಸಂಸ್ಕೃತಿ ಯನ್ನೇ ಬಿಟ್ಟುಹೋಗಿದ್ದಾರೆ ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ.  ಸಿದ್ದೇಶ್ವರ ಗುರುಗಳು ಎಷ್ಟು ಪ್ರೀತಿ, ವಿಶ್ವಾಸ  ಹಾಗೂ  ಸಂಸ್ಕೃತಿಯನ್ನೇ ಬಿಟ್ಟುಹೋಗಿದ್ದಾರೆ ಎನ್ನುವುದು ಅಲ್ಲಿನ ಜನತೆ ನಡೆದುಕೊಂಡ ರೀತಿಯನ್ನು ನೋಡಿದಾಗ ನಿಜವಾಗಿಯೂ ಸಿದ್ದೇಶ್ವರರ ಮಾತಿನಂತೆ ನಡೆದುಕೊಳ್ಳುವ ಜನ ಎಂದೆನಿಸಿದೆ. ಸಹಾಯ, ಸಹಕಾರ, ಊಟ, ತಿಂಡಿ, ನೀರು ನೀಡುತ್ತಿದ್ದಾರೆ. ಇದಕ್ಕಾಗಿ  ವಿಜಯಪುರದ ಸಮಸ್ತ ಜನತೆಗೆ ಧನ್ಯವಾದಗಳನ್ನು ಮುಖ್ಯ ಮಂತ್ರಿಗಳು ತಿಳಿಸಿದರು.

Related