ಸಿದ್ಧರಾಮಯ್ಯನವರ ಮತ್ತೊಂದು ಹಗರಣ ದಾಖಲೆಗಳ ಸಹಿತ ಬಯಲು

ಸಿದ್ಧರಾಮಯ್ಯನವರ ಮತ್ತೊಂದು ಹಗರಣ ದಾಖಲೆಗಳ ಸಹಿತ ಬಯಲು

ಬೆಂಗಳೂರು: ಬಿಜೆಪಿ  ಎನ್ ಆರ್ ರಮೇಶ್ ಇಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ನಾಳೆ ಎನ್ ಆರ್ ರಮೇಶ್ ದೂರು ನೀಡಲಿದ್ದಾರೆ.

ಚೆಕ್ ರೂಪದಲ್ಲಿ ಹಣವನ್ನು ಪಡೆದು ಪ್ರಭಾವೀ ವ್ಯಕ್ತಿಯೊಬ್ಬರಿಗೆ ಪ್ರಭಾವೀ ಹುದ್ದೆಯನ್ನು ದಯಪಾಲಿಸಿರುವ ಬಗ್ಗೆ ದೂರು.  ಕಿಂಗ್ಸ್ ಕೋರ್ಟ್ ವಿವೇಕ್ ಎಂದೇ ಖ್ಯಾತಿಯನ್ನು ಪಡೆದಿರುವ ಎಲ್. ವಿವೇಕಾನಂದ ಎಂಬ ಪ್ರಭಾವೀ ವ್ಯಕ್ತಿಯೊಬ್ಬರಿಂದ 01 ಕೋಟಿ 30 ಲಕ್ಷ ರೂಪಾಯಿ ಹಣವನ್ನು ಪಡೆದು, ಪ್ರಭಾವೀ ಹುದ್ದೆಯನ್ನು ದಯಪಾಲಿಸಿರುವ ದಾಖಲೆಗಳು ಲಭ್ಯ.

BANGALORE TURF CLUB ನ  Steward (ಉಸ್ತುವಾರಿ) ಹುದ್ದೆಗೆ 2014 ರಲ್ಲಿ L. ವಿವೇಕಾನಂದ ಅವರನ್ನು ನೇಮಕ ಮಾಡಿರುವ ಸಿದ್ಧರಾಮಯ್ಯ. 03 ವರ್ಷಗಳ ಅವಧಿಗೆ BANGALORE TURF CLUB ನ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿದ್ದ ಸಿದ್ಧರಾಮಯ್ಯ.

28/07/2014 ರಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಎಲ್. ವಿವೇಕಾನಂದ ಅವರಿಂದ 01 ಕೋಟಿ 30 ಲಕ್ಷ ರೂಪಾಯಿಗಳ ಚೆಕ್ ಅನ್ನು ಸ್ವೀಕರಿಸಿರುವ ದಾಖಲೆ ಬಹಿರಂಗ.

ಲೋಕಾಯುಕ್ತಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ 2018 ರ ಏಪ್ರಿಲ್ 21 ರಂದು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಾಲ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿರುತ್ತಾರೆ.

01 ಕೋಟಿ 30 ಲಕ್ಷ ರೂಪಾಯಿಗಳಷ್ಟು ಹಣವನ್ನು ಚೆಕ್ ಮೂಲಕ ಪಡೆದುಕೊಂಡು ಎಲ್. ವಿವೇಕಾನಂದ ಅಲಿಯಾಸ್ ಕಿಂಗ್ಸ್ ಕೋಟ್ ವಿವೇಕ್ ಅವರಿಗೆ BANGALORE TURF CLUB ನ Steward ಸ್ಥಾನದಲ್ಲಿ ನಿಯೋಜನೆ ಮಾಡಿರುವುದು ಕಾನೂನು ರೀತ್ಯಾ ಅಕ್ಷಮ್ಯ.

ಕೇಂದ್ರ ಸರ್ಕಾರದ ಗೃಹ ಇಲಾಖೆಯ ನಿಯಮ 4.1 ಸ್ಪಷ್ಟವಾಗಿ ಹೇಳುವಂತೆ ಮುಖ್ಯಮಂತ್ರಿಗಳಾಗಲೀ ಅಥವಾ ಯಾವುದೇ ಸಚಿವರಾಗಲೀ ಯಾವುದೇ ವ್ಯಕ್ತಿಗೆ ಪ್ರಭಾವೀ ಹುದ್ದೆಯನ್ನು ನೀಡಿ, ಫಲಾನುಭವಿಯಿಂದ ಯಾವುದೇ ರೀತಿಯ ಉಡುಗೊರೆಗಳನ್ನಾಗಲೀ, ನಗದನ್ನಾಗಲೀ ಅಥವಾ ಯಾವುದೇ ರೂಪದಲ್ಲಿ ಹಣವನ್ನು ಸ್ವೀಕರಿಸುವುದು ಅಕ್ಷಮ್ಯ ಅಪರಾಧವಾಗಿರುತ್ತದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ – 1988 ರ ಕಲಂ 07, 08, 09, 10, 13 ರ ಅಡಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರಭಾವೀ ವ್ಯಕ್ತಿಯೊಬ್ಬರಿಂದ 01 ಕೋಟಿ 30 ಲಕ್ಷ ರೂಪಾಯಿಗಳಷ್ಟು ಹಣವನ್ನು ಚೆಕ್ ಮೂಲಕ ಪಡೆದು BANGALORE TURF CLUB ನ ಕಾರ್ಯಕಾರಿ ಸಮಿತಿಯ ಸದಸ್ಯ (Steward) ಸ್ಥಾನಕ್ಕೆ ನಿಯೋಜನೆ ಮಾಡಿರುವುದು ಅಕ್ಷಮ್ಯವಾಗಿರುವುದರಿಂದ ಶ್ರೀ. ಸಿದ್ಧರಾಮಯ್ಯನವರ ವಿರುದ್ಧ ಲೋಕಾಯುಕ್ತದಲ್ಲಿ ದೂರನ್ನು ದಾಖಲಿಸಲಾಗುತ್ತಿದೆ.

ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಪ್ರಭಾವಿ ವ್ಯಕ್ತಿಯೊಬ್ಬರಿಂದ ಹಣ ಪಡೆದು ಉನ್ನತ ಹುದ್ದೆಗೆ ನೇಮಕ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಈ Kick-Back ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಅಥವಾ CBI / CID ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗಳನ್ನು  ಆಗ್ರಹಿಸಿದ ಎನ್.ಆರ್.ರಮೇಶ್ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಎನ್.ಆರ್.ರಮೇಶ್.

ಸಿಎಂ ಗಮನಕ್ಕೆ ಈಗಾಗಲೇ ಎನ್ ಆರ್ ರಮೇಶ್ ತಂದಿದ್ದು,ಸಿಎಂ ಈ ಬಗ್ಗೆ ಸೂಕ್ತ ತನಿಖೆಗೆ ವಹಿಸೋ ನಂಬಿಕೆ ಇದೆ ಎಂದು ದಾಖಲೆ ಬಿಡುಗಡೆ ಮಾಡಿದ ಬಳಿಕ ಎನ್ ಆರ್ ರಮೇಶ್ ಹೇಳಿದಾರೆ.

 

 

Related