ನೂತನ ಅಧ್ಯಕ್ಷರಾಗಿ ಸಿದ್ದಣ್ಣ ಚಂದ್ರಶೇಖ ಆರಬೋಳ ಆಯ್ಕೆ

ನೂತನ ಅಧ್ಯಕ್ಷರಾಗಿ ಸಿದ್ದಣ್ಣ ಚಂದ್ರಶೇಖ ಆರಬೋಳ ಆಯ್ಕೆ

ಶಹಾಪುರ:  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿದ್ದಣ್ಣ ಚಂದ್ರಶೇಖ ಆರಬೋಳ ೧೩೧ ಮತಗಳ ಅಂತರದಿಂದ ತನ್ನ ಸಮೀಪದ ಪ್ರತಿಸ್ಪರ್ಧಿ ಮಹೇಶ್ಚಂದ್ರ ಚಂದ್ರಶೇಖರ ಆನೇಗುಂದಿ ಎದುರು ಜಯಭೇರಿ ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಜು.೨೧ ಭಾನುವಾರ ಚುನಾವಣೆ ಹಿನ್ನಲೆ ಮತದಾನ ಜರುಗಿತು. ಮಹಾಸಭೆ ತಾಲೂಕು ಘಟಕಕ್ಕೆ ಅಧ್ಯಕ್ಷ-೧ ಮತ್ತು ಕಾರ್ಯಕಾರಿಣಿ ಸದಸ್ಯರು ೨೦ ಪದಾಧಿಕಾರಿಗಳ ಸ್ಥಾನದಲ್ಲಿ ಕಾರ್ಯಕಾರಿಣಿಯ ೨೦ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿಗಳಾದ ಮಹೇಶ್ಚಂದ್ರ ಆನೇಗುಂದಿ ಮತ್ತು ಸಿದ್ದಣ್ಣ ಆರಬೋಳ ಮಧ್ಯೆ ಮೂಡದ ಒಮ್ಮತದ ಹಿನ್ನಲೆಯಲ್ಲಿ ಚುನಾವಣೆ ಅನಿವಾರ್ಯವಾಯಿತು.
ಜು.೨೧ರಂದು ನಗರದ ಫಕೀರೇಶ್ವರ ಮಠದ ಭಾವೈಕ್ಯ ಭವನದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೫ಗಂಟೆಯವರೆಗೆ ಮತದಾನ ಜರುಗಿತು. ಮತದಾನದ ನಂತರ ಮತ ಏಣಿಕೆ ಪ್ರಾರಂಭವಾಯಿತು.
ತಾಲೂಕು ಘಟಕದಲ್ಲಿ ಒಟ್ಟು ಸದಸ್ಯರು ೯೨೪ರಲ್ಲಿ ೧೧೬ಮಹಿಳಾ ಸದಸ್ಯರು,೫೬೫ಪುರುಷ ಸದಸ್ಯರು ಸೇರಿ ಒಟ್ಟು ೬೮೧ (ಶೇ.೭೪)ಸದಸ್ಯರು ಮತದಾನ ಮಾಡಿದರು. ಸಂಜೆ ೫ಗಂಟೆಯ ನಂತರ ಮತ ಏಣಿಕೆ ಮುಕ್ತಾಯವಾದಾಗ ಸಿದ್ದಣ್ಣ ಚಂದ್ರಶೇಖರ ಆರಬೋಳ ೪೦೪ಮತಗಳನ್ನು ಪಡೆದರು ಪ್ರತಿಸ್ಪರ್ಧಿಯಾದ ಮಹೇಶ್ಚಂದ್ರ ಚಂದ್ರಶೇಖರ ಆನೇಗುಂದಿ ೨೭೩ ಮತಗಳು ಪಡೆದು ೧೩೧ಮತಗಳ ಅಂತರದಿಂದ ಪರಾಭವಗೊಂಡರು.

“ಸಮಾಜದ ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ಮಹಾಸಭೆಯ ಕಾರ್ಯಕಲಾಪಗಳನ್ನು ಮುನ್ನಡೆಸಿಕೊಂಡು ಬರಲು ಮತ್ತೊಂದು ಜವಾಬ್ದಾರಿ ಹೊರೆಸಿದ್ದು, ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಸರ್ವರ ಸಲಹೆ ಸೂತ್ರಗಳನ್ನು ಪಾಲಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು” ಎಂದು ನೂತನ ಅದ್ಯಕ್ಷರಾದ  ಸಿದ್ದಣ್ಣ ಆರಬೋಳ  ಹೇಳಿದರು.

 

Related