ಗದಗ: ಇತ್ತೀಚಿಗೆ ಕರ್ನಾಟಕ ರಾಜ್ಯದ ಜನತೆಯನ್ನು ಬೆಚ್ಚಿ ಬೆಳಿಸಿರುವ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಸಂಚಲನವೇ ಸೃಷ್ಟಿಯಾಗಿದೆ
ಇನ್ನೂ ಇದರ ಬೆನ್ನಲ್ಲೇ ಮತ್ತೆ ಇದೀಗ ಅವಳಿ ನಗರ ಗದಗ-ಬೆಟಗೇರಿಯಲ್ಲಿ ಇಂತಹದ್ದೇ ಒಂದು ಅಕ್ರಮ ಬಯಲಾಗಿದ್ದು ಕಂಡು ಬಂದಿದೆ.
ಹೌದು ಮುದ್ರಣ್ಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಗದಗ-ಬೆಟಗೇರಿ ಅವಳಿ ನಗರದಲ್ಲಿ ಇದೀಗ ನಗರಸಭೆ ಆಸ್ತಿ ಹಗರಣ ಬಯಲಾಗಿದ್ದು ಮಾಜಿ ಅಧ್ಯಕ್ಷ ಸೇರಿ ಇನ್ನು ಹಲವರಲ್ಲಿ ನಡುಕ ಶುರುವಾಗಿದೆ. ಈ ಹಗರಣದಲ್ಲಿ ಬಿಜೆಪಿಯವರ ಕೈವಾಡ ಇದ್ದಿದ್ದು ಕಂಡುಬಂದಿದ್ದು ಇದೀಗ ಬಿಜೆಪಿಯ ಸದಸ್ಯರಲ್ಲೂ ಕೂಡ ನಡುಕ ಶುರುವಾಗಿದೆ. ಬಿಜೆಪಿ ಆಡಳಿತದ ವಿರುದ್ಧ ಅವಳಿ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನೂರಾರು ಕೋಟಿ ರೂ. ಮೌಲ್ಯದ ನಗರಸಭೆ ಆಸ್ತಿ ಲೂಟಿಗೆ ರೂಪಿಸಿದ್ದ ಸಂಚು ಬಯಲಾಗಿದೆ. ನಗರಸಭೆ ಹಿಂದಿನ ಪ್ರಭಾರಿ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ್ ಎಂಬುವವರ ದೂರು ಆಧರಿಸಿ ಗದಗ ನಗರ ಸಭೆಯ ಮಾಜಿ ಅಧ್ಯಕ್ಷೆ ಮತ್ತು ಬಿಜೆಪಿ ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಬಡಾವಣೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನೂರಾರು ಕೋಟಿ ರೂ. ಮೌಲ್ಯದ 35 ಎಕರೆ ಆಸ್ತಿ ಕಬಳಿಸುವ ದುರುದ್ದೇಶದಿಂದ ಲೀಜ್ ನೀಡಲು ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ನಕಲಿ ಸಹಿ ಮಾಡಿ ಮಂಜೂರು ಮಾಡಲಾಗಿದೆ. ಎ1 ಖಾಸಗಿ ವ್ಯಕ್ತಿ ವಿಜಯಲಕ್ಷ್ಮಿ ಶಿಗ್ಲಿಮಠ ಹಾಗೂ ಎ2 ಸೆಕ್ರೆಟರಿ ದಿ ಕಾಟನ್ ಮಾರ್ಕೆಟ್ ವರ್ಕ್ ಓವನರ್ಸ್ ಹಾಗೂ ಅಸೋಸಿಯೇಟ್ಸ್ ವಿರುದ್ಧವೂ ಪ್ರಶಾಂತ್ ದೂರು ದಾಖಲಿಸಿದ್ದಾರೆ. ಎ2 ಸೆಕ್ರೆಟರಿ ದಿ ಕಾಟನ್ ಮಾರ್ಕೆಟ್ ವರ್ಕ್ ಓವನರ್ಸ್ ಹಾಗೂ ಅಸೋಸಿಯೇಟ್ಸ್ಗೆ 35 ಎಕರೆ ಲೀಜ್ ನೀಡಲು ನಕಲಿ ಠರಾವು ಸೃಷ್ಟಿ ಮಾಡಲಾಗಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದು ಬಹಳ ಹೆಮ್ಮೆ: ಡಿಸಿಎಂ
2023ರ ಅಕ್ಟೋಬರ್ 26ರಂದು ನಗರಸಭೆಗೆ ಎ2 ಪತ್ರ ನೀಡಿದ್ದಾರೆ. 2024ರ ಫೆಬ್ರವರಿ 9ರಂದು ನಗರಸಭೆ ಸಾಮಾನ್ಯ ಸಭೆ ನಡೆದಿದೆ. ಸಭೆಯಲ್ಲಿ ಠರಾವು ನಂ. 378 ಪಾಸಾಗಿದೆ. ಎಲ್ಲ ಆಸ್ತಿ ಅನುಭೋಗದಾರರಿಗೆ ಲೀಜ್ ನೀಡಲಾಗಿದೆಂದು ನಕಲಿ ಠರಾವು ಸೃಷ್ಟಿ ಮಾಡಲಾಗಿದೆ.
2024ರ ಜುಲೈ 22ರಂದು ಲೀಜ್ ನೀಡಿದೆ ಅಂತ ನಕಲಿ ಪತ್ರ ಸೃಷ್ಟಿಸಿ ನಗರಸಭೆ ಆಯುಕ್ತರ ನಕಲಿ ಸಹಿ ಮಾಡಲಾಗಿದೆ. ಈ ಮೂಲಕ ನಗರಸಭೆ, ಸರ್ಕಾರಕ್ಕೆ ಮಾಡಲಾಗುತ್ತಿರುವ ಅಪರಾಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೂಚಕರಾಗಿ ಬಿಜೆಪಿ ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪರಿಂದ ಸಹಿ ಕೂಡ ಹಾಕಿದ್ದಾರೆ.
ಹಾಗಿದ್ದರೆ ಈ ಪ್ರಕರಣದಲ್ಲಿ ಯಾರ್ಯಾರಿದ್ದಾರೆ ಎಂಬುದು ಪೊಲೀಸರು ಬಯಲು ಮಾಡಿ, ಈ ಪ್ರಕರಣವನ್ನು ತನಿಖೆಗೊಳಿಸುತ್ತಾರ ಅಥವಾ ಈ ಪ್ರಕರಣವನ್ನು ಬಿಜೆಪಿಯವರು ಮುಚ್ಚಿ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.