ಮೆಟ್ರೋ ಪ್ರಯಾಣಿಕರಿಗೆ  ಶಾಕಿಂಗ್ ಸುದ್ದಿ

  • In State
  • February 14, 2020
  • 388 Views
ಮೆಟ್ರೋ ಪ್ರಯಾಣಿಕರಿಗೆ  ಶಾಕಿಂಗ್ ಸುದ್ದಿ

ಬೆಂಗಳೂರು, ಫೆ. 14: ಬೆಂಗಳೂರು ನಗರದಲ್ಲಿ ಮೆಟ್ರೋ ಸಂಚಾರ ಪ್ರಾರಂಭವಾದಾಗಿನಿಂದ ಹಿಡಿದು ಇವರಿಗೆ ಬೆಂಗಳೂರು ನಗರವಾಸಿಗಳು ಹಾಗೂ ಕೆಲಸಗಾರರು ಹೆಚ್ಚುಕಡಿಮೆ ಮೆಟ್ರೋವನ್ನೇ ಅವಲಂಬಿಸಿದ್ದಾರೆ

ಹೌದು, ಫೆ.16 ರಂದು ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಮುಖ್ಯ ಮಾಹಿತಿಯನ್ನು ನೀಡಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ ಹಾಗೂ ಯಲಚೇನಹಳ್ಳಿ ನಿಲ್ದಾಣದ ನಡುವಣ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ ಸಿ ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿಸ್ತರಿಸಿದ ರೀಚ್-4 ಸಂಬಂಧ ಯಲಚೇನಹಳ್ಳಿ ವಿದ್ಯುತ್ ಸ್ವೀಕರಿಸುವ ಉಪಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅಂಜಾನಪುರ ನಿಲ್ದಾಣದವರೆಗೆ ವಿದ್ಯುತ್ ಕೇಬಲ್ಗಳನ್ನು ಅಳವಡಿಸುವ ಕೆಲಸ ನಿರ್ವಹಿಸಲಾಗುತ್ತಿದೆ. ಹೀಗಾಗಿ ಫೆ.16 ರಂದು ಆರ್ವಿ ರಸ್ತೆ ನಿಲ್ದಾಣ ಮತ್ತು ಯಲಚೇನಹಳ್ಳಿ ನಿಲ್ದಾಣದವರೆಗಿನ ಹಸಿರು ಮಾರ್ಗದಲ್ಲಿ ಯಾವುದೇ ಮೆಟ್ರೋ ರೈಲುಗಳು ಓಡಾಡುವುದಿಲ್ಲ. ನಾಗಸಂದ್ರದಿಂದ ಆರ್ವಿ ರಸ್ತೆವರೆಗೆ ಮೆಟ್ರೋ ಸೇವೆ ಎಂದಿನಂತೆ ಇರಲಿದೆ.

 

Related