ರಜಿನಿಕಾಂತ್, ಶಿವರಾಜ್ ಕುಮಾರ್ ಕಾಂಬಿನೇಷನ್ ಚಿತ್ರ ಬೆಂಗಳೂರಿನಲ್ಲಿ ಶೂಟಿಂಗ್..

ರಜಿನಿಕಾಂತ್, ಶಿವರಾಜ್ ಕುಮಾರ್ ಕಾಂಬಿನೇಷನ್  ಚಿತ್ರ ಬೆಂಗಳೂರಿನಲ್ಲಿ ಶೂಟಿಂಗ್..

ಇದೇ ಮೊದಲ ಬಾರಿಗೆ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ ನಟನೆಯ ತಲೈವರ್ 169 (ಸಿನಿಮಾಗೆ ಟೈಟಲ್ ಇಟ್ಟಿಲ್ಲ) ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದೀಗ ನಿಜವಾಗಿದ್ದು, ಈ ಸಿನಿಮಾದ ನಿರ್ದೇಶಕ ನೆಲ್ಸನ್ ಬೆಂಗಳೂರಿಗೆ ಆಗಮಿಸಿ ಕಥೆಯನ್ನೂ ಹೇಳಿದ್ದಾರೆ. ಈ ವಿಷಯವನ್ನು ಸ್ವತಃ ಶಿವರಾಜ್ ಕುಮಾರ್ ಕೂಡ ಖಚಿತ ಪಡಿಸಿದ್ದಾರೆ.

ನಾನು ಚಿಕ್ಕಂದಿನಿಂದಲೂ ರಜನಿಕಾಂತ್ ಅವರನ್ನು ಬಲ್ಲೆ. ಅಪ್ಪಾಜಿ ಜೊತೆ ಅನೇಕ ಬಾರಿ ನೋಡಿದ್ದೇನೆ. ವಿಶೇಷವಾಗಿ ಗೌರವಿಸುವ ವ್ಯಕ್ತಿಗಳಲ್ಲಿ ಅವರು ಕೂಡ ಒಬ್ಬರು. ನನ್ನ ಮತ್ತು ರಜನಿಕಾಂತ್ ಅವರ ಕಾಂಬಿನೇಷನ್ ಅನ್ನು ಅಭಿಮಾನಿಗಳು ಇಷ್ಟ ಪಡುತ್ತಾರೆ. ಆಗಸ್ಟ್ ನಿಂದ ಈ ಸಿನಿಮಾದ ಶೂಟಿಂಗ್ ನಡೆಯಲಿದೆ ಎಂದು ಸಿನಿಮಾ ಟೀಮ್ ತಿಳಿಸಿದೆ ಎಂದಿದ್ದಾರೆ ಶಿವರಾಜ್ ಕುಮಾರ್.

ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ನ ದೃಶ್ಯಗಳನ್ನು ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಲಾಗಿದೆಯಂತೆ. ಆಗಸ್ಟ್ನಿಂದ ಸಿನಿಮಾದ ಶೂಟಿಂಗ್ ಶುರುವಾದರೆ, ಶಿವಣ್ಣ ಮತ್ತು ರಜನಿಕಾಂತ್ ಕಾಂಬಿನೇಷನ್ ದೃಶ್ಯಗಳು ಸೆಪ್ಟಂಬರ್ ಹೊತ್ತಿಗೆ ಚಿತ್ರೀಕರಣವಾಗಲಿವೆಯಂತೆ.

Related