ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ : ಶಿವಣ್ಣ

ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ : ಶಿವಣ್ಣ

ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ನಿರ್ದೇಶಕ ಗೀತಕೃಷ್ಣ ಮಾತಿಗೆ ಶಿವರಾಜ್ ಕುಮಾರ್ ತಿರುಗೇಟು ನೀಡಿದ್ದಾರೆ. ಯಾರೋ ಏನೋ ಹೇಳಿದರು ಅಂತ ಕೇಳೋದು ಬೇಡ. ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ ಎಂದು ಶಿವಣ್ಣ ಹೇಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಟಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಗೀತಕೃಷ್ಣ ಸ್ಯಾಂಡಲ್ ವುಡ್  ಬಗ್ಗೆ ಕೆಟ್ಟದಾಗಿ ಮಾತನಾಡಿ ವಿವಾದ ಸೃಷ್ಟಿ ಮಾಡಿಕೊಂಡಿದ್ದರು. ಕನ್ನಡದ ನಟಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಗೀತಾಕೃಷ್ಣ ಅವರನ್ನು ಕನ್ನಡಿಗರು ತರಾಟೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಶಿರಸಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್, ಯಾರೋ ಏನೋ ಹೇಳಿದರು ಅಂತ ಕೇಳೋದು ಬೇಡ. ಕನ್ನಡ ಇಂಡಸ್ಟ್ರೀ ಏನು ಅಂತ ಜಗತ್ತಲ್ಲಿ ಪ್ರೂ ಆಗಿದೆ ಎಂದು ತಿರುಗೇಟು ನೀಡಿದ್ದಾರೆ.

Related