ಶೆಟ್ಟರ್ ಮನೆ ಮುಂದೆ ಶ್ರೀರಾಮ ಸೇನೆಯಿಂದ ಧರಣಿ..!

ಶೆಟ್ಟರ್ ಮನೆ ಮುಂದೆ ಶ್ರೀರಾಮ ಸೇನೆಯಿಂದ ಧರಣಿ..!

ಹುಬ್ಬಳ್ಳಿ ಜೂ 08 :  ಮಸೀದಿ, ದೇವಾಲಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ಸ್ಪೀಕರ್ ಬಳಕೆ ವಿಚಾರದಲ್ಲಿ ಸರ್ಕಾರಕ್ಕೆ ನೀಡಿದ ಗಡುವು ಮುಗಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಿವಾಸದ ಮುಂದೆ ಇಂದು ಶ್ರೀರಾಮ ಸೇನೆಯಿಂದ ಧರಣಿ, ಸತ್ಯಾಗ್ರಹ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಬಿಜೆಪಿ ಜಯಗಳಿಸಿದ್ದೆ ಹಿಂದೂಗಳಿಂದ ಆದರೆ ಹಿಂದೂಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಯಾಕೆ ಕಿವಿ ಮುಚ್ಚಿ ಕುಳಿತುಕೊಂಡಿದ್ದಾರೆಂಬುದು ತಿಳಿಯುತ್ತಿಲ್ಲ. ಈಗಾಗಲೇ ಹೊರಡಿಸಿದ ಸುತ್ತೋಲೆಯನ್ನು ಜಾರಿಗೊಳಿಸಬೇಕು. ಇಲ್ಲದೇ ಹೋದರೆ ಹೋರಾಟ ನಿಶ್ಚಿತ ಎಂದು ಶೆಟ್ಟರ್ ಅವರ ಆಪ್ತ ಸಹಾಯಕರಿಗೆ ಮನವಿ ಅರ್ಪಿಸಿದರು.

ಧ್ವನಿವರ್ಧಕ ನಿರ್ಬಂಧ ಕುರಿತು ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆ ಪ್ರಕಟಿಸಿ. ಮೈಕ್ ಬಳಸಲು ಧಾರ್ಮಿಕ ಕೇಂದ್ರಗಳು ಅನುಮತಿ ಪಡೆಯಬೇಕು. ರಾತ್ರಿ ೧೦ ಗಂಟೆ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಹಿನ್ನಲೆಯಲ್ಲಿ ಗಡುವು ನೀಡಲಾಗಿತ್ತು. ನಿಯಮಗಳು ಜಾರಿಯಾಗಿಲ್ಲ. ಸರ್ಕಾರದ ಸುತ್ತೋಲೆ ಕಸದ ಬುಟ್ಟಿಗೆ ಸೇರಿವೆಂದು ಆಕ್ರೋಶ ವ್ಯಕ್ತಪಡಿಸಿದರು.


ಬಿಜೆಪಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತಿವಿ ಎಂದ ಮುತಾಲಿಕ್ ಎಲ್ಲಾ ವಿಷಯದಲ್ಲೂ ನಾವೇ ಮಾತನಾಡಿ ನಾವೇ ಕೇಸ್ ಹಾಕಿಸಿಕೊಳ್ಳಬೇಕು.ನೀವು ಯಾಕೆ ಇದ್ದೀರಿ ಎಂದು ಪ್ರಶ್ನಿಸಿದರು. ಧರಣಿಯಲ್ಲಿ ಅಣ್ಣಪ್ಪ ದಿವಟಗಿ, ಬಸವರಾಜ ದುರ್ಗದ, ಚಿದು ಕಲಾಲ ಸೇರಿದಂತೆ ಅನೇಕರಿದ್ದರು.

Related