ಕುರಿಗಾಹಿಯನ್ನು ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

ಕುರಿಗಾಹಿಯನ್ನು ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

ಶಹಾಪುರ: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮಕನಕಟ್ಟಿ ಎನ್ನುವ ಕುರಿಗಾಹಿಯ ಕುರಿ ಕಳ್ಳತನಕ್ಕೆ ಬಂದ ಮೂವರು ಕಳ್ಳರು ಕುರಿಗಾಹಿಯ ಅಡ್ಡೆಗೆ ಹೋಗಿ ಕುರಿ ಕದ್ದುಯ್ಯುವ ವೇಳೆ ಕುರಿಕಳ್ಳರನ್ನು ಹಿಡಿಯಲು ಹೋದ ಕುರಿಗಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದಿದ್ದು ಕೂಡಲೇ ಕುರಿಗಾಹಿ ಹತ್ಯೆ ಮಾಡಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ಧೇಶಕ ಶಾಂತಗೌಡ ನಾಗನಟಿಗಿ ಆಗ್ರಹಿಸಿದರು.

ಈ ಕುರಿತು ತಹಸೀಲ್ ಕಚೇರಿ ಎದುರು ಕುರಿ ಮತ್ತು ಉಣ್ಣೆ ಉತ್ಪಾದಕರ ಒಕ್ಕೂಟ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಸರಕಾರ ಆರ್ಥಿಕ ನೆರವು ನೀಡಬೇಕು.  ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಸರಕಾರ ಕುರಿಗಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ಕುರಿಗಾಹಿಗಳಿಗೆ ಬಂದುಕು ಕೊಡುವ ವ್ಯವಸ್ಥೆ ಜಾರಿ ಮಾಡಬೇಕು. ಈಗಾಗಲೇ ಬಾಗಲಕೋಟೆ, ವಿಜಯಪುರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕುರಿಗಾಹಿಗಳಿಗೆ ಬಂದೂಕು ತರಬೇತಿ ವ್ಯವಸ್ಥೆಯನ್ನು ಕೊಡಲಾಗುತ್ತಿದ್ದು ಯಾದಗಿರಿ ಜಿಲ್ಲೆಯಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಕುರಿಗಾಹಿಗಳಿದ್ದು ಅದನ್ನು ನಮ್ಮ ಜಿಲ್ಲೆಗೂ ಜಾರಿಗೆ ಬರುವಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.‌ ಇದನ್ನೂ ಓದಿ: ಬಿಜೆಪಿಯವರೆಲ್ಲ ಪಾಕಿಸ್ತಾನದ ಚೇಳಾಗಳ?: ಪ್ರಿಯಾಂಕ್ ಖರ್ಗೆ

ತಾಲೂಕಿನ ಸೈದಾಪುರ ಗ್ರಾಮದ ಭೀಮಣ್ಣ ಮಾಳಿಗಪ್ಪ ಮೇಟಿ ಎನ್ನುವವರಿಗೆ ಸೇರಿದ 12 ಕುರಿಗಳನ್ನು ಮೇಯಿಸಿ ಸಂಜೆ ವೇಳೆ ಚಿಗರಳ್ಳಿ ಬಳಿ ಹೋಗುವಾಗ ಕಾರ್ ಡಿಕ್ಕಿ ಹೊಡೆದಿದ್ದು 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಕುರಿಗಾಹಿಗು ಸಹ ಕೈ ಮುರಿದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರ ಕೂಡಲೇ ನೆರವು ನೀಡಬೇಕೆಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರ ಮಹಾಮಂಡಳಿ ನಿರ್ಧೇಶಕರು ಶಾಂತಗೌಡ ನಾಗನಟಿಗಿ ಹೇಳಿದರು.

ಈ ಸಂದರ್ಭದಲ್ಲಿ ಮಾಳಪ್ಪ ಕೆಂಭಾವಿ, ಶರಣಬಸವ ಸೈದಾಪುರ, ಶರಬಣ್ಣ ರಸ್ತಾಪುರ, ಮಲ್ಲಣಗೌಡ ತಿಪ್ಪನಹಳ್ಳಿ, ಭೀಮನಗೌಡ ಹುಲ್ಕಲ್, ದೇವಿಂದ್ರಪ್ಪ ಮೇಟಿ, ನಿಂಗಣ್ಣ ರಾಜಾಪುರ, ತಿರುಪತಿಗೌಡ ಪಾಟೀಲ್, ನರಸಪ್ಪ ವಿಭೂತಿಹಳ್ಳಿ, ನಿಂಗಣ್ಣ ಎನ್, ಮಹಾದೇವಪ್ಪ ಪೂಜಾರಿ, ಯಮನೂರ ವಕೀಲರು, ಶರಣಗೌಡ ಬಿರದಾರ, ಸಿದ್ದಣ್ಣ ಕನ್ಯಾಕೊಳ್ಳೂರ, ಬಲಭೀಮ ಮಡ್ನಾಳ ಸೇರಿದಂತೆ ಇತರರು ಇದ್ದರು.

 

Related