ಮಂಕಿಪಾಕ್ಸ್ ಎರಡನೇ ಕೇಸ್ ಸುಳಿವು..!

ಮಂಕಿಪಾಕ್ಸ್ ಎರಡನೇ ಕೇಸ್ ಸುಳಿವು..!

ನವದೆಹಲಿ, ಜುಲೈ 27 : ನವದೆಹಲಿಯಲ್ಲಿ ಎರಡನೇ ಶಂಕಿತ ಮಂಕಿಪಾಕ್ಸ್ ಸೋಂಕಿತ ಪ್ರಕರಣವು ವರದಿಯಾಗಿದ್ದು, ವಿದೇಶದಿಂದ ಆಗಮಿಸಿದ ಪ್ರಯಾಣಿಕನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನೆಲೆ ವ್ಯಕ್ತಿಯನ್ನು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಂಕಿಪಾಕ್ಸ್ ಸೋಂಕಿನ ಮೊದಲ ವ್ಯಕ್ತಿಯ ಜೊತೆಗೆ ಈ 30ರ ವ್ಯಕ್ತಿಗೆ ಯಾವುದೇ ಸಂಪರ್ಕವಿಲ್ಲ. ಆದರೆ ಈತ ವಿದೇಶಿ ಪ್ರವಾಸದ ಹಿನ್ನೆಲೆ ಹೊಂದಿದ್ದು, ದದ್ದು ಮತ್ತು ಗಾಯಗಳನ್ನು ಹೊಂದಿರುವ ಶಂಕಿತ ರೋಗಿಯ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ.

ದೆಹಲಿಯಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್-ಸೋಂಕಿತನ ಮನೆಯವರಲ್ಲಿ ಒಬ್ಬರಿಗೆ ದೇಹದಲ್ಲಿ ನೋವು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇದರ ಹೊರತಾಗಿ ಯಾವುದೇ ರೋಗದ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

Related