ಧಾರಾಖಾರ ಮಳೆಯಿಂದಾಗಿ ಶಾಲೆಗೆ ನುಗ್ಗಿದ ನೀರು..!!

  • In Crime
  • May 19, 2022
  • 284 Views

ಚಿತ್ರದುರ್ಗ, (ಮೇ.19): ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ಬುಧವಾರ  ರಾತ್ರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿತ್ರದುರ್ಗ ಸೇರಿದಂತೆ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ನಗರ ಹಾಗೂ ಹಳ್ಳಿಗಾಡಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ಮನೆಗಳು ಕುಸಿದು ಬಿದ್ದಿವೆ. ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯಗಳು ನಾಶವಾಗಿವೆ.


ಅಲ್ಲದೆ ಸಾಕಷ್ಟು ಜಮೀನಿನಲ್ಲಿ ನೀರು ನಿಂತು ಕಳೆದ ವಾರವಷ್ಟೇ ಉಳುಮೆ ಮಾಡಿದ್ದ ಬೆಳೆಯು ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.
ನಿನ್ನೆ ಸಂಜೆ 6 ಗಂಟೆ ಸುಮಾರಿನಿಂದ ಜಿಲ್ಲೆಯ ಹಲವೆಡೆ ಪ್ರಾರಂಭಗೊಂಡ ಮಳೆ ಅರ್ಭಟ ರಾತ್ರಿ ಆಗುತ್ತಿದ್ದಂತಲೇ ಹೆಚ್ಚಾಯಿತು. ರಾತ್ರಿಯಿಂದ ಬೆಳಗ್ಗೆ ವರೆಗೂ ಸುರಿದ ಧಾರಾಕಾರ ಮಳೆಗೆ ಚಿತ್ರದುರ್ಗ ತಾಲ್ಲೂಕಿನ 11 ಮನೆಗಳು ಕುಸಿದು ಬಿದ್ದಿವೆ. ಅಲ್ಲದೆ ಮಲ್ಲಾಪುರ ಕೆರೆ ಕೊಡಿಬಿದ್ದು ಕೆರೆಯ ಪಕ್ಕದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ.

ಬಿರುಗಾಳಿಗೆ ಶಾಲೆಯಲ್ಲಿನ ಎರಡು ಮರಗಳು ಉರುಳಿ ಬಿದ್ದಿದ್ದು, ಶಾಲೆಯ ಆವರಣ ಕೆರೆ ಮಯವಾಗಿತ್ತು. ಇದರಿಂದಾಗಿ ಶಿಕ್ಷಕರು ಹಾಗೂ ಮಕ್ಕಳು ಶಾಲೆಯ ಒಳಗಡೆ ಹೋಗಲು ಸಾಧ್ಯವಾಗದಕಾರಣ ಎರಡು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಲಾಗಿದೆ.

Related