ಮಳೆಗಾಲಕ್ಕೂ ಮುನ್ನ ಸಿದ್ದತೆ ಪರಿಶೀಲಿಸಿದ ಸತೀಶ್ ರೆಡ್ಡಿ

ಮಳೆಗಾಲಕ್ಕೂ ಮುನ್ನ ಸಿದ್ದತೆ ಪರಿಶೀಲಿಸಿದ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆಗಾಲದ ತುರ್ತುಪರಿಸ್ಥಿತಿಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ತೆಗೆದುಕೊಳ್ಳ ಬೇಕಾಗಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿ, ಮಳೆಯಾದ ಸಂದರ್ಬದಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ BBMP ಅಧಿಕಾರಿಗೆ ಬೊಮನಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಸತೀಶ್ ರೆಡ್ಡಿ ಅವರು ಸೂಚಿಸಿದರು.

ಪರಿಶೀಲನೆ ಮಾಡುವ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ ಅವರು, ಬೆಂಗಳೂರು ನಗರದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ 49 ಕಡೆ ಪ್ರವಾಹ ಉಂಟಾಗುತ್ತಿತ್ತು ಸದ್ಯ ಕೇವಲ ಒಂದು ಕಡೆ ಪ್ರವಾಹದಿಂದ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ಬೊಮ್ಮನಹಳ್ಳಿ ಕ್ಷೇತ್ರ ಪ್ರವಾಹ ಮುಕ್ತವಾಗಬೇಕುಕಾದರೆ ನಾವೆಲ್ಲರೂ ಮುಂಜಾಗ್ರತಾ ಕ್ರಮವಹಿಸಬೇಕು ಎಂದರು.

ಇನ್ನು ಮಳೆ ಬಂದ ಸಂದರ್ಭದಲ್ಲಿ ಮಳೆ ನೀರನ್ನು ಹೊರಗ ಹಾಕಲು ಮಿಷಿನ್ ಜೊತೆ ಜನಗಳು ಸಿದ್ಧವಿದ್ದರೆ ಮಾತ್ರ ಮಳೆ ಬಂದಾಗ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬಹುದು.

ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಕೆಲಸವನ್ನು ಪ್ರಾರಂಭ ಮಾಡಿದ್ದು, ಮುಂದಿನ‌‌ ದಿನಗಳಲ್ಲಿ ಮಳೆಯಿಂದ ಯಾವುದೇ ಅನಾಹುತ ಜರುಗದಂತೆ ಕ್ರಮವಹಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ‌  ತಿಳಿಸಲಾಗಿದೆ.‌ ಮತ್ತು ಮುಂಜಾಗ್ರತೆಯ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ ಎಂದರು.

 

 

 

Related