ಗರ್ಭಿಣಿ ಮಹಿಳೆಯರಿಗೆ ಸತೀಶ್ ರೆಡ್ಡಿ ದಂಪತಿಗಳಿಂದ ಬಾಗೀನ

ಗರ್ಭಿಣಿ ಮಹಿಳೆಯರಿಗೆ ಸತೀಶ್ ರೆಡ್ಡಿ ದಂಪತಿಗಳಿಂದ ಬಾಗೀನ

ಬೊಮ್ಮನಹಳ್ಳಿ:ಕೇಂದ್ರ ಸರ್ಕಾರದ ಮಹತ್ತರವಾದ ಯೀಜನೆಗಳು ಮಹಿಳೆಯರ ಬಾಳು ಬೆಳಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.

ಅವರು ಭಾನುವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು, ಮಹಿಳೆಯ ಆಶೀರ್ವಾದ ಪಡೆದವರು ಎಲ್ಲಾ ವಲಯದಲ್ಲೂ ಶಕ್ತಿವಂತರಾಗಿ ಗೆದ್ದು ಬರುತ್ತಾರೆ, ಭಾರತೀಯ ಜನತಾ ಪಕ್ಷದಲ್ಲಿ ಮಹಿಳಾ ಶಕ್ತಿ ಇಡೀ ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ಪ್ರಧಾನ ಮಂತ್ರಿ ಉಜ್ವಲ ಯೋಜನೆಗಳು ಕೇಂದ್ರ ಸರ್ಕಾರದ ಮಹಿಳೆಯರ ಪರವಾಗಿರುವ ಹಲವಾರು ಯೋಜನೆಗಳಾಗಿದ್ದು ಉಜ್ವಲ ಯೋಜನೆಯ ಮೂಲಕ ಇಂದು ಗ್ರಾಮೀಣ ಭಾಗದ ಮಹಿಳೆಯರು ಸೌದೆಯನ್ನು ಸುಡುವ ಕಷ್ಟದಿಂದ ಹೊರ ಬಂದಿದ್ದು ಇದು ನಮ್ಮ ಮಹಿಳೆಯರ ಪರವಾಗಿ ತಂದಿರುವ ಮಹತ್ತರದ ಯೋಜನೆ ಎಂದರು.

ಸಂಸದೆ ಸುಮಲತಾ ಮಾತನಾಡಿ, ನಾಲ್ಕು ವರ್ಷದ ರಾಜಕಾರಣದಲ್ಲಿ ಸಾಕಷ್ಟು ಕಲಿತಿದ್ದೇನೆ ಯಾರ್ಯಾರು ಹೇಗೆ ಎನ್ನುವುದು ನನಗೆ ಅರ್ಥ ಆಗಿದೆ, ನಮ್ಮ ದೇಶದಲ್ಲಿ ನರೇಂದ್ರ ಮೋದಿಯವರ ಹೆಸರು ಎಂದಿಗೂ ಕೂಡ ಇದೇ ರೀತಿ ಇದ್ದರೆ ಮಾತ್ರ ಭದ್ರ ಭೂನಾದಿಯ ದೇಶ ಎನ್ನುವುದು  ಉಳಿಯಲು ಸಾದ್ಯ, ಜನರ ಜೊತೆಗೆದ್ದು ಬಡವರ ಪರಾಗಿ ಕೆಲಸ ಮಾಡುತ್ತಿರುವ ಏಕೈಕ ಪಕ್ಷ ಬಿಜೆಪಿ ಎನ್ನುವುದು ಈಗಾಗಲೇ ಸಾಬೀತಾಗಿದೆ, ನಮ್ಮ ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಯಾರು ಮಾಡುತ್ತಾರೆ ಅವರ ಕೈಯನ್ನು ಬಲಪಡಿಸುವುದು ನಮ್ಮ ಜವಾಬ್ದಾರಿ ಎಂದರು.

ಶಾಸಕ ಎಂ.ಸತೀಶ್ ರೆಡ್ಡಿ ಹಾಗೂ ನಮ್ಮ ನಡುವೆ 20 ವರ್ಷಗಳ ಕುಟುಂಬದ ಒಡನಾಟ ಇದೆ ಅಂಬರೀಶ್ ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಸತೀಶ್ ರೆಡ್ಡಿ ಹಾಗೂ ಅವರು ಸ್ನೇಹದಿಂದ ಇರುತ್ತಿದ್ದರು. ಅಂಬರೀಶ್ ಅವರ ನಿಧನದ ನಂತರವೂ ಕೂಡ ಯಾವಾಗಲೂ ನನ್ನನ್ನು ವಿಚಾರಿಸಿಕೊಳ್ಳುವ ವ್ಯಕ್ತಿತ್ವವನ್ನು ಸತೀಶ್ ರೆಡ್ಡಿ ಅವರು ಹೊಂದಿದ್ದಾರೆ ಎಂದರೆ ಅವರ ಒಳ್ಳೆಯತನ ಎಷ್ಟಿದೆ ಎನ್ನುವುದು ಅರ್ಥ ಆಗುತ್ತದೆ ಎಂದರು.

ಸಚಿವ ಆರ್.ಅಶೋಕ್‌ ಮಾತನಾಡಿ,ಕರ್ನಾಟಕದಲ್ಲಿ ಕಾಂಗ್ರೆಸ್ ಇರಬೇಕಾ ಅಥವಾ ತೊಲಗಬೇಕಾ ಎನ್ನುವ ಚುನಾವಣೆ ಇದಾಗಿದೆ, ನರೇಂದ್ರ ಮೋದಿಯವರು ಈ ದೇಶದಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಬದಲಾವಣೆ ತಂದಿದ್ದಾರೆ, ಹೆಣ್ಣು ಮಕ್ಕಳಿಗೆ ಈ ಹಿಂದೆ ಮಿಲಿಟರಿ ಹಾಗೂ ಏರ್ ಫೋರ್ಸ್ ನಲ್ಲಿ ಅವಕಾಶ ಕೇವಲ ಐದು ಪರ್ಸೆಂಟ್ ಇತ್ತು, ನರೇಂದ್ರ ಮೋದಿಯವರು ಇದನ್ನು ಹೆಚ್ಚು ಮಾಡಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ, ಪಾಕಿಸ್ತಾನ ಚೀನಾವನ್ನು ಈಗಾಗಲೇ ಬಗ್ಗು ಬಡಿದು ಭಾರತವನ್ನು ಭದ್ರವನ್ನಾಗಿ ಮಾಡಿ ವಿಶ್ವನಾಯಕನಾಗಿ ಮೋದಿ ಹೊರಹೊಮ್ಮುತ್ತಿದ್ದಾರೆ, ಮೋದಿ ಹೊರಟು ಹೋಗಬೇಕು ಎನ್ನುವುದಾಗಿ  ಕಾಂಗ್ರೆಸ್ ಕನಸು ಕಾಣುತ್ತಿದೆ ಇದರಿಂದ ಕಾಂಗ್ರೆಸ್ ಮತ್ತೆ ಚಿಗುರ ಬಹುದು ಎನ್ನುವ ಆಸೆ ಅವರಿಗಿದೆ ಆದರೆ ಇದು ಈಡೇರುವುದಿಲ್ಲ ಎಂದರು. ಕರ್ನಾಟಕದಲ್ಲಿ ಈ ಚುನಾವಣೆಯ ಮೂಲಕ ಬದಲಾವಣೆ ತಂದು ರಾಜ್ಯದಲ್ಲೂ ಕೂಡ ಮಹಿಳೆಯರು ಇನ್ನಷ್ಟು ಮುಂದೆ ಬರುವ ಸ್ಥಿತಿ ನಿರ್ಮಾಣ ಮಾಡಬೇಕು,ಬಿಜೆಪಿ ಪರಿವರ್ತನ ಯಾತ್ರೆಯಲ್ಲಿ ಜನ ಅಭೂತಪೂರ್ವದ ಬೆಂಬಲವನ್ನು ನೀಡುತ್ತಿದ್ದಾರೆ ಎಂದರು.

ಜೆಡಿಎಸ್ ಕಾಂಗ್ರೆಸ್ ನವರು ಕಳ್ಳ ಮಳ್ಳಾರಂತೆ- ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರಿಗೆ ಅವಕಾಶ ಕೊಟ್ಟು ಕಳ್ಳ ಮಳ್ಳರ ಸರ್ಕಾರ ಕೆಲವೇ ತಿಂಗಳುಗಳಲ್ಲಿ ಪತನಗೊಂಡು ರಾಜ್ಯದಲ್ಲಿನ ಜನರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಅಂತ ಅವರ ಕೈಯಲ್ಲಿ ಮತ್ತೆ ಸರ್ಕಾರವನ್ನು ಕೊಡಬೇಡಿ.

ಕರ್ನಾಟಕದಲ್ಲಿ ನಿರ್ಮಾ ನಿರ್ಮಾ ಅಂತ ಸರ್ಪ್ ಹಾಕಿ ತೊಳೆಯೋ ಕಾಲ ಬಂದಿದೆ- ಮುಸ್ಲಿಂ ಮಹಿಳೆಯರಂತೆ ತೊಂದರೆ ಆಗದಂತೆ ಮೋದಿಯವರು ತ್ರಿವಳಿ ತಲಾಕ್ ವಿರುದ್ಧ ಕ್ರಮ ತಂದರು. ಕರ್ನಾಟಕದಲ್ಲಿ ಆಸರೆ ಕಾರ್ಯಕ್ರಮ ದಡಿ ಮಹಿಳೆಯರಿಗೆ 10,000 ನೀಡಲಾಗುತ್ತಿದೆ ಈ ಹಿಂದೆ ಕಾಂಗ್ರೆಸ್ ಬರಿ 3000 ಕೊಡುತ್ತಿತ್ತು, ಕರ್ನಾಟಕದಲ್ಲಿ ಬದಲಾವಣೆ ಪರ್ವ ಶುರುವಾಗಿದೆ, 5000 ಮತ ಪಡೆದ ಕಡೆ ಹತ್ತು ಸಾವಿರ ಹದಿನೈದು ಸಾವಿರ ಜನ ಸೇರುತ್ತಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಉಳಿಗಾಲವೇ ಇಲ್ಲ.

ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಮಹಿಳಾ ಸಮಾವೇಶದ ಮೂಲಕ ಇಂದು ಮದುವೆಗೆ ಬಾಗಿಲವನ್ನು ನೀಡುವ ಮೂಲಕ ಸಮಾಜದಲ್ಲಿ ಮಹಿಳೆಯ ಶಕ್ತಿ ಏನು ಎನ್ನುವುದನ್ನು ಸಾಧಿಸಿ ತೋರಿಸುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದು ಈ ಸಂದರ್ಭದಲ್ಲಿ ಪುರುಷರು ಅವರ ಜೊತೆ ಸೇರಿ ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ನಟ ದರ್ಶನ್- ನಾನು ಸ್ನೇಹಕ್ಕೆ ತಲಬಾಗುವ ವ್ಯಕ್ತಿ ದ್ವೇಷಕ್ಕೆ ಎಂದು ಕೂಡ ನಾನು ತಲೆಬಾಗುವುದಿಲ್ಲ ಸತೀಶ್ ರೆಡ್ಡಿ ಸ್ನೇಹ ಬಾಂಧವ್ಯವನ್ನು ನನ್ನ ಜೊತೆ ಹೊಂದಿದ್ದು ಅವರ ಪರವಾಗಿ ಸದಾ ನಾನು ನಿಲ್ಲುತ್ತೇನೆ, ಕೋವಿಡ್ ಸಂದರ್ಭದಲ್ಲಿ ಅವರು ಜನರಿಗೆ ಮಾಡಿರುವ ಸೇವೆ ನಾನು ಕಣ್ಣಾರೆ ನೋಡಿದ್ದೇನೆ.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಬೊಮ್ಮನಹಳ್ಳಿ ಉಸ್ತುವಾರಿ ರಾಧಾಕೃಷ್ಣ,ಮಹಿಳಾ ಘಟಕದ ರಾಜ್ಯಾದ್ಯಕ್ಷೆ ಗೀತಾ ವಿವೇಕಾನಂದ, ಬೆಂಗಳೂರು ದಕ್ಷಿಣ ಘಟಕದ ಮಹಿಳಾ ಅಧ್ಯಕ್ಷ ವಿಜಯಲಕ್ಷ್ಮಿ ಆನಂದ್, ಬೊಮ್ಮನಹಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ರಾಮಚಂದ್ರ, ಆಶಾ ಸತೀಶ್ ರೆಡ್ಡಿ,ಮಾಲಾ ಶ್ರೀನಿವಾಸ್ ರೆಡ್ಡಿ ಮತ್ತಿತರರು ಇದ್ದರು.

 

 

 

 

Related