ಸತ್ಯಸಾಯಿಬಾಬಾರ ಆಧ್ಯಾತ್ಮಿಕ, ಭಾವೈಕ್ಯತೆ ಅಮರ

ಸತ್ಯಸಾಯಿಬಾಬಾರ ಆಧ್ಯಾತ್ಮಿಕ, ಭಾವೈಕ್ಯತೆ ಅಮರ

ಚಿಕ್ಕಬಳ್ಳಾಪುರ: ಆಧ್ಯಾತ್ಮಿಕ ಚಿಂತನೆಗಳ ಮೂಲಕ  ನಮ್ಮ ನಡುವೆ ಜೀವಿಸಿದ್ದ ಸತ್ಯಸಾಯಿಬಾಬಾರ ಆಧ್ಯಾತ್ಮಿಕ ಮತ್ತು ಭಾವೈಕ್ಯತೆಯು ಅಮರವಾದುದು. ಅವರ ಹಾದಿಯಲ್ಲಿ ಸತ್ಯಸಾಯಿ ಸರಳ ಮೆಮೋರಿಯಲ್ ಹಾಸ್ಪಿಟಲ್ ಉದ್ಘಾಟನೆಯಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ಮುದ್ದೇನಹಳ್ಳಿ ಸತ್ಯ ಸಾಯಿ ಸರಳ ಮೆಮೋರಿಯಲ್ ಹಾಸ್ಪಿಟಲ್ ಉದ್ಘಾಟನೆ ನಂತರ ಮಾತನಾಡಿ, ಬೆಂಗಳೂರಿನ ವೈಟ್‌ಫೀಲ್ಡ್ನಲ್ಲಿ 1998ರಲ್ಲಿ ನಾನು ಸತ್ಯಸಾಯಿಬಾಬಾರನ್ನು ಭೇಟಿ ಮಾಡಿದ್ದೆ ಎಂದು ನೆನಪಿಸಿಕೊಂಡ. ಆಗ ಬಾಬಾ ನೀಡಿದ ಪುಸ್ತಕ ವಿಷಯ ಅಧ್ಯಯನ ಮಾಡಿದ ನಂತರ ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಿಯಾದೆ ಎಂದರು.

ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಕಾಲೇಜು ಮತ್ತು ಹಾಸ್ಪಿಟಲ್ ಆಗಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸತ್ಯಸಾಯಿ ಸರಳ ಮೆಮೋರಿಯಲ್ ಹಾಸ್ಪಿಟಲ್ ಉದ್ಘಾಟನೆ ಮಾಡಿಸುತ್ತಿರುವುದು ನನ್ನ ಸೌಭಾಗ್ಯ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕಾಲೇಜು ಮತ್ತು ಹಾಸ್ಪಿಟಲ್ ನಿರ್ಮಾಣದ ಕನಸು ಕಟ್ಟಿಕೊಂಡ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾಕ್ಟರ್ ಕೆ.ಸುಧಾಕರ್, ಸಂಸದ ಬಿ.ಎನ್. ಬಚ್ಚೇಗೌಡ, ಮಧುಸೂದನ ಸತ್ಯಸಾಯಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.

Related