ಕೊಪ್ಪಳ: ಇತ್ತೀಚಿಗಷ್ಟೇ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮುಧೋಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿಯಲ್ಲಿ ಹಿರೇಮ್ಯಾಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿರುದ್ಧ ಸಂಕನೂರು ಹಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಗೆದ್ದಿದ್ದು, ಬಾಲಕಿಯರ ಕಬಡ್ಡಿ ತಂಡವು ವಿಜಯಶಾಲಿಯಾದ ಪ್ರಯುಕ್ತ ತಾಲೂಕ್ ಮಟ್ಟಕ್ಕೆ ಆಯ್ಕೆ ಆಗಿದೆ. ಇದನ್ನೂ ಓದಿ: ಎತ್ತಿನಹೊಳೆ ಹೋರಾಟದ ಫಲ ಇಂದು ದೊರಕಿದೆ: ಮುನಿಯಪ್ಪ
ಇನ್ನು ತಾಲೂಕು ಮಟ್ಟದ ಕ್ರೀಡಾಕೂಟವು ಇದೇ ಸೆಪ್ಟಂಬರ್ ತಿಂಗಳು ಯಲಬುರ್ಗಾ ತಾಲೂಕಿನಲ್ಲಿ ಜರುಗಲಿದ್ದು ಇಲ್ಲಿ ಹಲವಾರು ಬಾಲಕಿಯರ ಕಬಡ್ಡಿ ತಂಡಗಳು ಭಾಗವಹಿಸಲಿವೆ ಎಂದು ತಿಳಿದುಬಂದಿದೆ.