ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ ಬಾದ್‌ ಷಾನ ಅಬ್ಬರ.!

ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ ಬಾದ್‌ ಷಾನ ಅಬ್ಬರ.!

ಬೆಂಗಳೂರು: ಸದ್ಯ ಸಿನಿಮಾ ಲೋಕದಲ್ಲಿ ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ದೆ ಹವಾ ಶುರುವಾಗಿದೆ…ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಟೀಸರ್ ಎಲ್ಲೆಡೆ ಬಾರೀ ಸದ್ದು ಮಾಡುತ್ತಿದೆ.

ಹೌದು, ಬಾ ಬಾ… ಬ್ಲ್ಯಾಕ್‌ ಶಿಪ್‌ ಹ್ಯಾವು ಎನಿ ಕ್ಲೂ ಅಂತ ಶುರುವಾಗಿರೋ ಟೀಸರ್‌ನಲ್ಲಿ ನೀನು ನನ್ನ ರಾಂಗ್ ಮಾಡಿದೆ. ನಾನು ನಿನ್ನ ಗೇಮ್ ಎಂಡ್ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಡೈಲಾಗ್‌ನಲ್ಲಿ ಅಬ್ಬರಿಸಿದ್ದಾರೆ.

ಯೆಸ್..ಮ್ಯಾಕ್ಸ್ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸಕ್ಕತ್ ಡೈಲಾಗ್ ಹೊಡೆಯುವ ಮೂಲಕ ಎಂಟ್ರಿ ಕೊಡುತ್ತಾರೆ. ಇದೀಗ ಕಿಚ್ಚನ ಈ ಮಾಸ್ ಡೈಲಾಗ್ ಎಲ್ಲೇಲ್ಲೂ ಅಬ್ಬರಿಸುತ್ತಿದೆ. ಇದನ್ನೂ ಓದಿ: ಮ್ಯಾಕ್ಸ್ ಸಿನಿಮಾದ ಟೀಸರ್ ಔಟ್

ವಿಕ್ರಾಂತ್ ರೋಣ ಬಳಿಕ ಬರ್ತಿರೋ ಕಿಚ್ಚನ ಸಿನಿಮಾ ಮ್ಯಾಕ್ಸ್ ಆಗಿದೆ. ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ. ಟೀಸರ್‌ನಲ್ಲಿನ ಆ್ಯಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದ್ದು ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ.

ಇನ್ನು ಪ್ಯಾನ್-ಇಂಡಿಯಾ ಚಿತ್ರವಾದ ಮ್ಯಾಕ್ಸ್ ಒಂದು ಮಾಸ್ ಚಿತ್ರವಾಗಿದ್ದು, ಟೀಸರ್ ನಲ್ಲಿರುವ ಡೈಲಾಗ್ ತುಣುಕುಗಳು ಈಗಾಗಲೇ ಭರ್ಜರಿ ಸದ್ದು ಮಾಡಿ, ಸಿನಿ ಪ್ರೇಕ್ಷಕರು ಚಿತ್ರ ಬರುವಿಕೆಯನ್ನು ಎದುರು ನೋಡುವಂತೆ ಮಾಡಿದೆ. ಸದ್ಯ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌ ಟೀಸರ್‌ನಲ್ಲಿ ಡೈಲಾಗ್‌ ತುಣುಕುಗಳು ವೈರಲ್‌ ಆಗ್ತಿವೆ…

Related