ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನ ಬರ್ಬರ ಕೊಲೆ

ಶಹಾಪುರ: ತಾಲೂಕಿನ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಸಾದ್ಯಾಪುರ ಹಳ್ಳರ ಹತ್ತಿರ ರೌಡಿಶೀಟರ್‌ನನ್ನು ಹಳೇ ವೈಷಮ್ಯಕ್ಕೆ ಚಾಕು ಮಚ್ಚುನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ರವಿವಾರ ಬೆಳಗ್ಗೆ ೯:೩೦ ಗಂಟೆ ಸುಮಾರಿಗೆ ನಡೆದಿದೆ. ಸಣ್ಣಮಾಪಣ್ಣ ಭೀಮಪ್ಪ ಬಡಿಗೇರ(೫೫) ಕೊಲೆಯಾದ ವ್ಯಕ್ತಿ.
ಘಟನೆ ವಿವರ:
ಮಾಪಣ್ಣ ಮತ್ತು ಅಲಿಸಾಬ್ ಇಬ್ಬರೂ ಸೇರಿ ಭೀಮರಾಯನಗುಡಿಗೆ ಹೋಳಿ ಹುಣ್ಣಿಮೆಯ ಕರಿಯ ದಿನವಾಗಿದ್ದು ಕ್ಷರ‍್ಯ ಮಾಡಿಸಿಕೊಂಡು ಮಟನ್ ತೆಗೆದುಕೊಂಡು ತನ್ನೂರಾದ ಮದ್ರಿಕಿ ಗ್ರಾಮಕ್ಕೆ ಬೈಕ್ ಮೇಲೆ ತೆರಳುತ್ತಿದ್ದಾಗ ಸಾದ್ಯಾಪುರ ಗ್ರಾಮದ ಹಳ್ಳದ ಬಳಿ ದುಷ್ಕರ್ಮಿಗಳು ಹೆದ್ದಾರಿ ಮೇಲೆ ಬೈಕ್ ಅಡ್ಡಗಟ್ಟಿ ನಿಂತು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಆಗ ಬೈಕ್ ಸವಾರ ಅಲಿಸಾಬ್ (೫೨) ಓಡಿ ಹೋಗಿ ಮದ್ರಕಿ ಗ್ರಾಮದಲ್ಲಿ ಅಡಗಿ ಕುಳಿತುಕೊಂಡಾಗ ಮಾಪಣ್ಣನ ಮಕ್ಕಳು ನನ್ನ ತಂದೆಯನ್ನು ನೀನೆ ಕೊಲೆ ಮಾಡಿಸಿದ್ದೀಯಾ” ಎಂದು ತಂದೆಯ ಕೊಲೆ ಬೇನ್ನಲ್ಲೇ ತಂದೆಯ ಜೊತೆಗಿದ್ದ ಸಹಚರನನ್ನು ಮಕ್ಕಳು ಕೊಲೆ ಮಾಡಿದ್ದಾರೆ. ಮಾಪಣ್ಣನ ಶವವನ್ನು ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಅಲಿಸಾಬ್ ಶವವನ್ನು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ನಗರದ ಸರ್ಕಾರಿ ಆಸ್ಪತ್ರೆಯ ಎದುರು ನೂರಾರು ಜನ ಸೇರಿದ್ದರು. ಎರಡು ಕಡೆಯಿಂದಲೂ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related