ಒಂದೂವರೆ ತಿಂಗಳಲ್ಲೇ ಕಿತ್ತುಹೋದ ರಸ್ತೆಗಳು..!

  • In Crime
  • August 9, 2022
  • 269 Views
ಒಂದೂವರೆ ತಿಂಗಳಲ್ಲೇ ಕಿತ್ತುಹೋದ ರಸ್ತೆಗಳು..!

ಚಿತ್ರದುರ್ಗ ಆಗಸ್ಟ್ 09: ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಲೇ ಇರುತ್ತದೆ. ಆದ್ರೆ ಅವೆಲ್ಲ ಅಭಿವೃದ್ಧಿಗೆ ಬಳಕೆ ಆಗುತ್ತವಾ ಎನ್ನುವುದು ಈಗಿನ ಪ್ರಶ್ನೆ. ಹಣ ಸದ್ಬಳಕೆ ಮಾಡಿಕೊಳ್ಳಲು ಕಾವಲುಗಾರಂತೆ ಕೆಲಸ ಮಾಡಬೇಕಾದ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷಕ್ಕೆ ನಿರ್ಮಾಣ ಮಾಡಿದ ಕೇವಲ ಒಂದೂವರೆ ತಿಂಗಳಲ್ಲಿ ಡಾಂಬರ್ ರಸ್ತೆ ಕಿತ್ತು, ಗುಂಡಿ ಬಿದ್ದಿದೆ. ಇದನ್ನ ಗ್ರಾಮಸ್ಥರು ಗಮನಿಸುತ್ತಿದ್ದಂತೆ ಕಿತ್ತು ಹೋಗಿದ್ದ ಡಾಂಬರ್ ರಸ್ತೆಗೆ ಗುತ್ತಿಗೆದಾರ ಸೀಮೆಂಟ್ ಕಾಂಕ್ರೀಟ್ ತೇಪೆ ಹಾಕಿ, ಕಾಮಗಾರಿ ಪೂರ್ಣ ಆಗುವ ಮುನ್ನವೇ ಒಂದು ಕೋಟಿ ಹಣ ಬಿಲ್ ಮಾಡಿಸಿಕೊಂಡಿದ್ದು, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ, ಕರ್ತವ್ಯ ನಿರ್ಲಕ್ಷ ವಹಿಸಿದ ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರು ಹಿಡಿ ಶಾಪ ಹಾಕಿ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಾಲಘಟ್ಟ ಕೋಣನೂರು ಮಾರ್ಗದ ರಸ್ತೆ ಸಂಪೂರ್ಣ ಕಳಪೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಎರಡು ಗ್ರಾಮಗಳ ಮೂಲಕ ಜಿಲ್ಲಾ ಕೇಂದ್ರಕ್ಕೆ ಹಾದು ಹೋಗಿರುವ ಸಂಪರ್ಕ ರಸ್ತೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನಿರ್ಮಾಣವಾಗುತ್ತಿದ್ದು ರಸ್ತೆ ಫುಲ್ ಕಳಪೆ ಯಾಗಿದೆ. ರಸ್ತೆ ನಿರ್ಮಾಣ ಮಾಡಿ ಇನ್ನೂ ಕೇವಲ ಒಂದೂವರೆ ತಿಂಗಳಷ್ಟೇ ಆಗಿದ್ದು, ಟೆಂಡರ್ ಕಾಮಗಾರಿ ನಿರ್ಮಾಣದ ಅವಧಿ ಮುಗಿಯುವ ಮನ್ನವೇ ರಸ್ತೆ ತುಂಬೆಲ್ಲಾ ಡಾಂಬರ್ ಕಿತ್ತು, ಗುಂಡಿಗಳು ಬಿದ್ದಿವೆ. ವಾಹನಗಳು ಓಡಾಡಿದ ಜಾಗದಲ್ಲೆಲ್ಲಾ ಡಾಂಬರ್ ಹರಳಿನಂತೆ ಕಿತ್ತು ಹೋಗಿದೆ.

Related