ಜಿಲ್ಲೆಯ ಮನೆಮನೆಗೂ ನದಿ ಮೂಲದ ನೀರು-ಸಚಿವ

ಜಿಲ್ಲೆಯ ಮನೆಮನೆಗೂ ನದಿ ಮೂಲದ ನೀರು-ಸಚಿವ

ರಾಮನಗರ : ಜಿಲ್ಲೆಯಲ್ಲಿರುವ ಎಲ್ಲ 2 ಲಕ್ಷ ಮನೆಗಳಿಗೂ ಸದ್ಯದಲ್ಲೇ ಉತ್ತಮ ಗುಣಮಟ್ಟದ ನದಿಮೂಲದ ನೀರನ್ನು ಒದಗಿಸಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ತಾಲ್ಲೂಕಿನ ಕೆಂಪಸಾಗರ ಗ್ರಾಮದಲ್ಲಿ ಗುರುವಾರ ನಡೆದ ವಿಶ್ವೇಶ್ವರಸ್ವಾಮಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ ರಾಮನಗರ ಜಿಲ್ಲೆಯಲ್ಲೂ ಇದೇ ಮಾದರಿಯ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು,’ ಎಂದರು. ಈ  ದೇವಸ್ಥಾನವು ಮಾಗಡಿ ಕೆಂಪೇಗೌಡರು ಕಟ್ಟಿಸಿದಂತಹ ಚಾರಿತ್ರಿಕ ದೇವಸ್ಥಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಜಿಲ್ಲೆಯಲ್ಲಿ 2.500 ಕೆರೆಗಳಿದ್ದು, ಅವುಗಳ ಒತ್ತುವರಿಯನ್ನು ತೆರವುಗೊಳಿಸಿ ನೀರು ತುಂಬಿಸಲಾಗುವುದು. ಜೊತೆಗೆ ಜಿಲ್ಲೆಯ ಜನರಿಗೆ ಲಾಭ ತರುವಂತಹ ಸತ್ತೇಗಾಲ, ಎತ್ತಿನಹೊಳೆ ಮತ್ತು ಶ್ರೀರಂಗ ನೀರಾವರಿ ಯೋಜನೆಗಳನ್ನು ಕೂಡ ತ್ವರಿತವಾಗಿ ಮುಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೂ ಗಮನ ಹರಿಸಲಾಗಿದೆ. ಇದಕ್ಕಾಗಿ ಮರೂರು ಗ್ರಾಮದಲ್ಲಿ 2-3 ಸಾವಿರ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಇಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುವುದು. ಇದರಿಂದ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಗಳು ದೊರೆಯಲಿವೆ ಎಂದು ಸಚಿವರು ನುಡಿದರು.

Related