ಶ್ರೀಮಂತ ಪಾಟೀಲ್ ಡಿಮ್ಯಾಂಡ್

  • In State
  • February 4, 2020
  • 289 Views
ಶ್ರೀಮಂತ ಪಾಟೀಲ್ ಡಿಮ್ಯಾಂಡ್

ಬೆಂಗಳೂರು, ಫೆ. 2 : ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂಬ ಭರವಸೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದರು. ಅದರಂತೆ ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಬೇರೆಯದ್ದೇ ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.

ಬಿಎಸ್ವೈ ಎಲ್ಲರಿಗೂ ಮಾತುಕೊಟ್ಟಿದ್ದಾರೆ, ಅದರಂತೆ ನನ್ನನ್ನೂ ಕೂಡಾ ಸಚಿವರನ್ನಾಗಿ ಮಾಡುತ್ತಾರೆ ಎಂಬ ಭರವಸೆ ಇದೆ. ಆದರೆ ನನಗೆ ಸಂಪುಟ ವಿಸ್ತರಣೆ ಕುರಿತಾಗಿ ಯಾವುದೇ ಸಂದೇಶ ಬಂದಿಲ್ಲ. ಸಂದೇಶ ಬಂದ ಬಳಿಕವಷ್ಟೇ ಸಚಿವ ಸ್ಥಾನ ಖಚಿತವಾಗುತ್ತದೆ ಎಂದರು.ಈ ವೇಳೆ ಉಪಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿಗಳಾದ ಎಂಟಿಬಿ ನಾಗರಾಜ್ ಹಾಗೂ ಎಚ್ ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಶಾಸಕ ಶ್ರೀಮಂತ ಪಾಟೀಲ್ ಈಗಾಗಲೇ ಸಿಎಂ ಬಳಿ ನಾಲ್ಕು ಬಾರಿ ಮನವಿ ಮಾಡಿದ್ದೇವೆ ಎಂದಿದ್ದಾರೆ.ಸಂಪುಟದಲ್ಲಿ ಸೋತವರಿಗೆ ಸ್ಥಾನ ಇಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ಎಚ್ ವಿಶ್ವನಾಥ್ ಸಿಎಂ ಬಹಿರಂಗ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹೊಸಕೋಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಸಿಎಂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಸಿಎಂ ಬಿಎಸ್ ಯಡಿಯೂರಪ್ಪನವರು ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ನಾನು ಯಾವುದೇ ಶರತ್ತು ಹಾಕಿ ನಾನು ಬಿಜೆಪಿ ಸೇರಿಲ್ಲ. ಆದರೆ ಪಕ್ಷ ಸೇರ್ಪಡೆ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ಇದೆ. ಆದರೆ ನನ್ನ ಸೋಲಿಗೆ ಶರತ್ ಬಚ್ಚೇಗೌಡ ಹಾಗೂ ಬಿಎನ್ ಬಚ್ಚೇಗೌಡ ಕಾರಣ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ಬಿಎಸ್ವೈ ನಮ್ಮ ನಾಯಕರು ನಾನು ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಬಿಎಸ್ವೈ ನೀಡಿದ ಭರವಸೆಯನ್ನು ಒಂದಲ್ಲ ಒಂದು ದಿನ ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದರು.

Related