ಶಹಾಪುರ: ನಗರದ ಶಿವಸಜ್ಜನ ಕೋಲ್ಡ್ ಸ್ಟೋರೆಜ್‌ನಲ್ಲಿ ಮೆಣಸಿನಕಾಯಿ ಟೆಂಡರ್ ಪಡೆದವರು ಮೆಣಸಿನಕಾಯಿಯನ್ನು ಬೆಲೆ ನಿಗದಿ ಮಾಡಿ ಒಂದು ವಾರ ಕಳೆದ ನಂತರ ಇದೀಗ ರೈತರಿಗೆ ಹಣ ನೀಡದೆ ಮೆಣಸಿನಕಾಯಿಯನ್ನು ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳ ಜೊತೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಕಳೆದ ಒಂದು ವಾರದ ಹಿಂದೆ ಮೆಣಸಿನಕಾಯಿ ತೂಕ ಮಾಡಿ ಹಣವನ್ನು ಸಹ ನಿಗದಿ ಮಾಡಲಾಗಿತ್ತು. ಇದೀಗ ಏಕಾಏಕಿ ಬೇಡ ಅಂದರೆ ರೈತರು ಏನು ಮಾಡಬೇಕು. ಹಣವನ್ನು ಸಹ ನೀಡಿಲ್ಲಾ. ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ ಎಂದು ಅಲ್ಲಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಅಧಿಕಾರಿಗಳು ಟೆಂಡರ್ ಪಡೆದವರ ಮೇಲೆ ಹಿಡಿತ ಸಾಧಿಸಬೇಕು ಇದರಿಂದ ರೈತರಿಗೆ ವಂಚಿಸುತ್ತಿದ್ದಾರೆ. ಮೆಣಸಿನಕಾಯಿ ಬೆಳೆ ನೆಚ್ಚಿಕೊಂಡಿದ್ದ ರೈತರು ಕಂಗಾಲಾಗಿದ್ದು, ಟೆಂಡರ್ ಪಡೆದವರು ಯಾವುದೇ ಕಾರಣ ಕೊಡದೇ ಮೆಣಸಿನಕಾಯಿಯನ್ನು ಖರೀದಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈತರು ಇದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ಮಹಾಯುತಿ ನಾಯಕರು ಅಧ್ಯಯನ ಮಾಡಲಿ: ಡಿಕೆಶಿ
ತಾಲೂಕಿನ ಎಲ್ಲೆಂದರಲ್ಲಿ ಖರೀದಿ ಕೇಂದ್ರಗಳನ್ನು ಹಾಕಿ ಮುಗ್ಧ ರೈತರನ್ನು ವಂಚಿಸುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಟೆಂಡರ್ ಪಡೆದವರು ರೈತರಿಗೆ ವಂಚಿಸುವ ಕೆಲಸ ಮಾಡುತ್ತಿದ್ದು ಇದಕ್ಕೆಲ್ಲಾ ಯಾರು ಹೊಣೆ. ಕಷ್ಟಪಟ್ಟು ದುಡಿದು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವಂತಾಗಬೇಕು. ಇದಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಸಿದ್ದು ಪಟ್ಟೇದಾರ ನಮ್ಮ ಕರ್ನಾಟಕ ಸೇನೆ ತಾಲೂಕ ಅಧ್ಯಕ್ಷ ಆಗ್ರಹಿಸಿದರು.
ಇಲ್ಲಾ ಸೇ ಭಾಗವಾನ್ ಅವರಿಗೆ ಸೇರಿದ ಟೆಂಡರ್ ಇದಾಗಿದ್ದು, ಟೆಂಡರ್ ಪಡೆದವರು ಹಣ ಬಿಡುಗಡೆ ಮಾಡಿದರೆ ನಾವು ರೈತರಿಗೆ ಹಣ ನೀಡುತ್ತೇವೆ ಎಂದು ವಸೀ. ವ್ಯವಸ್ಥಾಪಕರು ಹೇಳಿದರು.