ಮೂರು ಸ್ಥಾನ ಯಾರಿಗಾಗಿ ಮೀಸಲು?

  • In State
  • February 4, 2020
  • 417 Views
ಮೂರು ಸ್ಥಾನ ಯಾರಿಗಾಗಿ ಮೀಸಲು?

ಬೆಂಗಳೂರು, ಫೆ. 2 : ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ 16 ಸ್ಥಾನಗಳ ಪೈಕಿ 13 ಅನ್ನು ಭರ್ತಿ ಮಾಡಿ ಇನ್ನೂ ಮೂರನ್ನು ಬಾಕಿ ಉಳಿಸಿಕೊಳ್ಳುತ್ತಿರುವುದು ಏಕೆ?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ 17 ಮಂದಿ ಶಾಸಕರ ಪೈಕಿ ರಾಣೆಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಕೂಡ ಒಬ್ಬರು. ಆದರೆ ಕಳೆದ ಡಿಸೆಂಬರ್ನಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆರ್.ಶಂಕರ್ಗೆ ಬಿಜೆಪಿಯಿಂದ ಟಿಕೆಟ್ ನೀಡಿರಲಿಲ್ಲ, ಬದಲಿಗೆ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡುವುದಾಗಿ ಮನವೊಲಿಸಿ ಅರುಣಕುಮಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಹೀಗಾಗಿ ಶಂಕರ್ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕಿದೆ.

ಆದರೆ ಮೇಲ್ಮನೆ ಸ್ಥಾನಗಳು ಮುಂಬರುವ ಜೂನ್ ತನಕ ಖಾಲಿ ಆಗುವುದಿಲ್ಲ. ಅಲ್ಲಿಯವರೆಗೂ ಶಂಕರ್ ಕಾಯುವುದು ಅನಿವಾರ್ಯವಾಗಿದೆ. ಕಾನೂನು ತೊಡಕು ಇರುವ ಕಾರಣ ಅವರು ಮೊದಲು ಮೇಲ್ಮನೆ ಸದಸ್ಯರಾದ ಬಳಿಕವೇ ಸಚಿವರಾಗಬೇಕಿದೆ. ಹೀಗಾಗಿ ಜೂನ್ ತನಕ ಅವರನ್ನು ಸಚಿವರನ್ನಾಗಿ ಮಾಡುವಂತಿಲ್ಲ. ಈಗಾಗಲೇ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ವರಿಷ್ಠರು ಶಂಕರ್ಗೆ ಮೇಲ್ಮನೆ ಸದಸ್ಯತ್ವ ಹಾಗೂ ಸಚಿವ ಸ್ಥಾನ ಖಾತರಿಪಡಿಸಿರುವುದರಿಂದ ಶಂಕರ್ಗೋಸ್ಕರ ಒಂದು ಸಚಿವ ಸ್ಥಾನ ಮೀಸಲಿಡಲಾಗಿದೆ. ಖಾಲಿ ಉಳಿಸಿಕೊಳ್ಳಲಿರುವ ಮೂರು ಸಚಿವ ಸ್ಥಾನಗಳ ಪೈಕಿ ಒಂದು ಶಂಕರ್ ಪಾಲಾಗಲಿದೆ.

Related