ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಮನವಿ

ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಮನವಿ

ದೇವದುರ್ಗ : ತಾಲ್ಲೂಕಿನಲ್ಲಿ ಕಾನೂನು ಬಾಹಿರವಾಗಿ ಮಟಕಾ, ಇಸ್ಪೀಟು, ಜೂಜಾಟ ಬೆಟ್ಟಿಂಗ್, ಮರಳು ಸಾಗಾಣಿಕೆ ಹಲವಾರು ಚಟುವಟಿಕೆಗಳು ನಡೆಯುತ್ತಿದ್ದರು, ಕಾನೂನು ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಸಂಪೂರ್ಣವಾಗಿ ನಿಷ್ಕಿಯವಾಗಿರುವಂತೆ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ಅಕ್ರಮ ಚಟುವಟಿಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲು ಜಾತ್ಯಾತೀತ ಜನತಾದಳ (ಎಸ್) ಪಕ್ಷದ ವತಿಯಿಂದ ರಾಯಚೂರು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರವನ್ನು ತಹಶೀಲ್ದಾರ್ ಕಚೇರಿಯ ಶಿರೇಸ್ತಾದಾರರ ಮುಖಾಂತರ ಮನವಿ ಸಲ್ಲಿಸಿದರು.

ಯುವಪೀಳಿಗೆ, ಜನಸಾಮಾನ್ಯರು ದಿವಾಳಿತನದ ದುರಂತಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಚಟುವಟಿಕೆಯನ್ನು ಕಡಿವಾಣ ಹಾಕಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವೀಕ್ಷಕರು ಕರೆಮ್ಮ ಜಿ.ನಾಯಕ, ತಾಲ್ಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಮುಖಂಡರಾದ ಖಾಜೇಗೌಡ ಗಬ್ಬೂರು, ವಿರೂಪಾಕ್ಷಪ್ಪ ಬಳೆ ಮಸರಕಲ್, ರಾಮಣ್ಣನಾಯಕ ಮದರಕಲ್, ರೇಣುಕಾ, ವೆಂಕನಗೌಡ ವಕೀಲರು ಮುಖಂಡರು ಇದ್ದರು.

Related