ತುಂಗಭದ್ರಾ ಜಲಾಶಯ..

ತುಂಗಭದ್ರಾ ಜಲಾಶಯ..

ತುಂಗಭದ್ರಾ ನದಿಯೂ ಮೂರು ರಾಜ್ಯಗಳ ಮಧ್ಯೆ ಹರಿಯುತ್ತಿರುವುದರಿಂದ ಟಿಬಿಪಿಯು ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಗಳು ಇರುತ್ತಾರೆ, ನೀರಿನ ಹಂಚಿಕೆಯ ಬಗ್ಗೆ ಟಿಬಿಪಿಯಲ್ಲಿಯೇ ನಿರ್ಧರಿಸುತ್ತಿದ್ದು, ಟಿಬಿಪಿಯು ನೀರಿನ ಪ್ರಮಾಣದಲ್ಲಿ ತಪ್ಪು ಲೆಕ್ಕ ನೀಡುತ್ತಿದೆ ಎಂಬ ಆರೋಪವು ಇದೆ.

ಕೊಪ್ಪಳ ಜು 19 : ತುಂಗಭದ್ರಾ ಜಲಾಶಯ ನಿರ್ಮಾಣವಾದ ನಂತರ ಇದೇ ಪ್ರಥಮ ಬಾರಿಗೆ ಜಲಾಶಯದ ನೀರಿನ ಸಂಗ್ರಹ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ವರ್ಷ ಅರ್ಧ ಟಿಎಂಸಿ ಹೂಳು ತುಂಬುತ್ತದೆ ಎಂಬ ವರದಿ ಇತ್ತು, ಆದರೆ ಈಗ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹ ಹೆಚ್ಚಳವಾಗಿದೆ ಎಂದು ಟಿಬಿಪಿ ದಾಖಲಿಸುತ್ತಿದೆ. ಈ ಬಗ್ಗೆ ರಾಜ್ಯ ಸರಕಾರದಿಂದ ಆಕ್ಷೇಪವಿದೆ. ಮತ್ತೊಮ್ಮೆ ಸರ್ವೆ ಮಾಡಲು ನಿರ್ಧರಿಸಿದೆ.

ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯವು ನಿರ್ಮಾಣವಾಗಿ 66 ವರ್ಷವಾಗಿದೆ. ಕಳೆದ 66 ವರ್ಷದಲ್ಲಿ ಜಲಾಶಯಕ್ಕೆ ಪ್ರತಿವರ್ಷ ಅರ್ಧ ಟಿಎಂಸಿಯಷ್ಟು ಹೂಳು ತುಂಬುತ್ತಿದೆ ಎಂದು ಈ ಹಿಂದಿನ ವರದಿಯಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಕಳೆದ ವರ್ಷದವರೆಗೂ ಜಲಾಶಯದಲ್ಲಿ ನೀರಿನ ಸಂಗ್ರಹವು 100.899 ಟಿಎಂಸಿ ನೀರು ಎಂದು ದಾಖಲಿಸಲಾಗುತ್ತಿತ್ತು. ಆದರೆ ಈ ವರ್ಷದಿಂದ ಜಲಾಶಯದಲ್ಲಿ ಒಟ್ಟು 105.788 ಟಿಎಂಸಿ ನೀರು ಸಂಗ್ರಹವಾಗುತ್ತಿದೆ ಎಂದು ತುಂಗಭದ್ರಾ ಯೋಜನಾ ಮಂಡಳಿ ದಾಖಲಿಸಿದೆ.

Related