ರತನ್‌ ಟಾಟಾ ಅವರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ

ರತನ್‌ ಟಾಟಾ ಅವರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ

ಬೆಂಗಳೂರು: ದೇಶದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ಅವರು ನಿಧನ ಹೊಂದಿದ್ದು ಅವರ ನಿಧನದಿಂದ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಇನ್ನು ರತನ್‌ ಟಾಟಾ ಅವರ ನಿಧನಕ್ಕೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿಯವರು ಸಂತಾಪ ಸೂಚಿಸಿದ್ದು, ರತನ್ ಟಾಟಾ ಅವರ ನಿಧನ ನನಗೆ ವೈಯಕ್ತಿಕ ನಷ್ಟ ಎಂದು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ರತನ್‌ ಟಾಟಾ ಅವರದ್ದು ಸಮಗ್ರ ವ್ಯಕ್ತಿತ್ವ, ನಾನು ಅವರ ಮನೆಯಿಂದ ಮಾತ್ರ ಪರೋಪಕಾರವನ್ನು ಕಲಿಯುತ್ತೇನೆ. ಅವರ ನಿಧನ ನನಗೆ ವೈಯಕ್ತಿಕ ನಷ್ಟ ಎಂದು ಸುಧಾ ಮೂರ್ತಿಯವರು ಹೇಳಿದ್ದಾರೆ. ಇದನ್ನೂ ಓದಿ:ರತನ್ ಟಾಟಾ ಮಾಜಿ ಪ್ರೇಯಸಿ ಭಾವುಕ ಪೋಸ್ಟ್

ರತನ್ ಟಾಟಾ ಅವರನ್ನು ಭೇಟಿಯಾಗಿದ್ದೆ. ಅವರು ಪ್ರಾಮಾಣಿಕತೆ, ಸರಳತೆ, ಯಾವಾಗಲೂ ಇತರರ ಕಾಳಜಿ ವಹಿಸುವ ಮತ್ತು ಸಹಾನುಭೂತಿ ಹೊಂದಿರುವ ವ್ಯಕ್ತಿಯಾಗಿದ್ದರು. ಅಪಾರ ತಾಳ್ಮೆ, ಅಪರೂಪದ ವ್ಯಕ್ತಿತ್ವದ ಮೂಲಕ ಅವರು ದಂತಕಥೆಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

 

Related