ರಮ್ಯಾ ಕೃಷ್ಣನ್ ಬಾಲ್ಯದಲ್ಲಿ ಹೀಗಿದ್ದರು!

  • In Cinema
  • July 10, 2020
  • 750 Views
ರಮ್ಯಾ ಕೃಷ್ಣನ್ ಬಾಲ್ಯದಲ್ಲಿ ಹೀಗಿದ್ದರು!

ಸಿನಿರಂಗದಲ್ಲಿ ವಯಸ್ಸಾಗುತ್ತಿದ್ದಂತೆಯೇ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅವರ ವಿಷಯದಲ್ಲಿ ಮಾತ್ರ ಇದು ಅನ್ವಯಿಸುವುದಿಲ್ಲ. ವಯಸ್ಸಿಗೆ ತಕ್ಕ ಪಾತ್ರಗಳ ಮೂಲಕ ಈಗಲೂ ಸಿನಿಪ್ರಿಯರನ್ನು ರಂಜಿಸುತ್ತಿರುವ ರಮ್ಯಾ ಅಭಿನಯಕ್ಕೂ ಸೈ. ಗ್ಲಾಮರ್ ಪಾತ್ರಗಳಿಗೂ ಓಕೆ ಎನ್ನುವ ಇವರು 49ನೇ ವಯಸ್ಸಿನಲ್ಲೂ ಸಖತ್ ಗ್ಲಾಮರಸ್ ಆಗಿ ಕಾಣಿಸ್ತಾರೆ.

ಈಗಲೂ ವೆಬ್ ಸರಣಿ, ಸಿನಿಮಾ ಅಂತ ಬ್ಯುಸಿಯಾಗಿರುವ ನಟಿ ಸಾಮಾಜಿಕ ಜಾಲತಾಣದಲ್ಲೂ ಸಖತ್ ಸಕ್ರಿಯವಾಗಿರುತ್ತಾರೆ. ಇತ್ತೀಚೆಗೆ ತಮ್ಮ ಬಾಲ್ಯದ ಶಾಲಾ ದಿನಗಳ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ ಈ  ಹಂಚಿಕೊಂಡು ಎಲ್ಲಿದ್ದೇನೆ ಗುರುತಿಸಿ ಎಂದು ಪ್ರಶ್ನಿಸಿದ್ದ ರಮ್ಯಾ ಕೃಷ್ಣನ್, ನಂತರ ತಾವಿರುವುದನ್ನು ಮಾರ್ಕ್ ಮಾಡಿ ಮತ್ತೆ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ಅವರ ಶಾಲಾ ದಿನಗಳಲ್ಲಿ ಸಹಪಾಠಿಗಳೊಂದಿಗೆ ತೆಗೆದ ಫೋಟೋ.

ಇನ್ನು ಮನೆಯಲ್ಲಿ ತಮ್ಮ ಮಗನೊಂದಿಗೆ ತೆಗೆದ ಫೋಟೋಗಳು ಹಾಗೂ ಸಾಕು ಪ್ರಾಣಿಗಳೊಟ್ಟಿಗಿನ ಫೋಟೋಗಳು, ಮೇಕಪ್ ಇಲ್ಲದ ಸಾಕಷ್ಟು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ತನ್ನ ತಂದೆ ಜೊತೆಗೆ ತೆಗೆದಿದ್ದ ಈ ಅಪರೂಪದ ಚಿತ್ರವನ್ನೂ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

ರಮ್ಯಾ ಕೃಷ್ಣ ಸದ್ಯ ಕನ್ನಡದ ‘ಶಿವಗಾಮಿ’, ತೆಲುಗಿನ ‘ಅಂಧಾಧುನ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Related