ಸಮರೋಪದಿ ಕಾರ್ಯಾಚರಣೆ ಜಂಟಿ ಆಯುಕ್ತ ರಾಮಕೃಷ್ಣ

ಸಮರೋಪದಿ ಕಾರ್ಯಾಚರಣೆ ಜಂಟಿ ಆಯುಕ್ತ ರಾಮಕೃಷ್ಣ

 ಬೊಮ್ಮನಹಳ್ಳಿ, ಮಾ. 23: ವಿವಿದ ಹೊರ ರಾಷ್ಟ್ರಗಳಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಬೊಮ್ಮನಹಳ್ಳಿ ವಲಯ ಪಾಲಿಕೆ ವ್ಯಾಪ್ತಿಯ ಎಚ್ ಎಸ್‌ಆರ್ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಿಗೆ ಆಗಮಿಸಿರುವ ಸುಮಾರು ಎರಡು ಸಾವಿರ ವಿದೇಶಿಗರು ಹಾಗೂ ನಿವಾಸಿಗಳನ್ನು ಪತ್ತೆ ಹಚ್ಚಿ ವೈದ್ಯಕಿಯ ತಪಾಸಣೆಗೊಳಪಡಿಸಿ ತೀರ್ವ ನಿಗಾ ಘಟಕ ಹಾಗೂ ಹದಿನಾಲ್ಕು ದಿಗಳ ಕಾಲ ಗೃಹ ಬಂಧನದಲ್ಲಿಡಲಾಗಿದೆ ಎಂದು ಜಂಟಿ ಆಯುಕ್ತ ರಾಮಕೃಷ್ಣ ಅವರು ತಿಳಿಸಿದ್ದಾರೆ.

ಕೊರೋನಾ ವಿರುದ್ಧ ಬೊಮ್ಮನಹಳ‍್ಳಿ ಪಾಲಿಕೆ ವ್ಯಾಪ್ತಿಯಲ್ಲಿ ಸಮರೋಪಾದಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶವ್ಯಾಪಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದ್ದನ್ನು ಸ್ಮರಿಸಿದ ಜಂಟಿ ಆಯುಕ್ತ ರಾಮಕೃಷ್ಣ ಅವರು ಕೊರೋನಾ ವಿರುದ್ಧ ಸಮರ ಸಾರುವ ಮೂಲಕ ಪ್ರತಿಯೊಬ್ಬರೂ ಮಹಾ ಮಾರಿ ಕೊರೋನಾ ಹರಡದಂತೆ ತೀರ್ವ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

ಆಗ್ನೇಯ ವಲಯ ಡಿಸಿಪಿ ಶ್ರೀಕಾಂತ್ ಜೋಷಿ ಹಾಗೂ ಪಾಲಿಕೆ ಜಂಟಿ ಆಯುಕ್ತ ರಾಮಕೃಷ್ಣ ಅವರ ನೇತೃದಲ್ಲಿ ಪಾಲಿಕೆ ಸಿಬ್ಬಂಧಿಗಳು ಹೊರ ರಾಷ್ಟçಗಳಿಂದ ಬೆಂಗಳೂರಿಗೆ ಆಗಮಿಸಿರುವವರನ್ನು ಅತ್ಯಂತ ಎಚ್ಚರಿಕೆ ಜಾಗರೂಕತೆಯಿಂದ ಸರ್ವೇ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿದೇಶಗಳಿಂದ ನಗರಕ್ಕೆ ಬಂದಿರುವ ಬೆಂಗಳೂರು ನಿವಾಸಿಗಳು ಹಾಗೂ ವಿದೇಶಿಗರನ್ನು ಪತ್ತೆ ಹಚ್ಚಲಾಗಿದ್ದು, ಶಂಕಿತ ಸೋಂಕಿತರನ್ನು ಹೊಸಕೋಟೆ ಬಳಿಯಿರುವ ತಪಾಸಣಾ ಕೇಂದ್ರಕ್ಕೆ ಕರೆದೊಯ್ದು ತಪಾಸಣೆಗೊಳಪಡಿಸಿ ಕೈಗೆ ಸೀಲು ಹಾಕಲಾಗುತ್ತಿದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.

ಎಚ್‌ಎಸ್‌ಆರ್ ಬಡಾವಣೆಯಲ್ಲಿ ಒಂದರಿಂದ ನಾಲ್ಕನೇ ಹಂತದವರೆಗೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಹೊರ ರಾಷ್ಟ್ರಗಳಿಂದ ಆಗಮಿಸಿರುವ ಸಾಫ್ಟ್ವೇರ್ ಉದ್ಯೋಗಿಗಳಿಂದಿಡಿದು ವಿವಿದ ಉದ್ದೆಗಳಲ್ಲಿದ್ದವರು ಬೆಂಗಳೂರಿಗೆ ಯಾರೇ  ಕೋವಿಡ್-19 ಶಂಕಿತರು ಕಳೆದ ಮಾ.8 ರಿಂದ ಈವರೆಗೆ ಬಂದರುವವರ ವಿಳಾಸ ಪತ್ತೆ ಹಚ್ಚಿ  ವೈದ್ಯಕೀಯ ತಪಾಸಣೆಗೊಳಪಡಿಸಿ ಹದಿನಾಲ್ಕು ದಿನಗಳ ಕಾಲ ಗೃಹ ಬಂಧನದಲ್ಲಿರುವಂತೆ ಮನವರಿಕೆ ಮಾಡಿಕೊಡುವುದರ ಜತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ರಾಮಕೃಷ್ಣ ಅವರು ಪ್ರಜಾವಾಹಿನಿಗೆ ತಿಳಿಸಿದ್ದಾರೆ.

ಕಳೆದೆರಡು ದಿನಗಳಲ್ಲಿ ಬೊಮ್ಮನಹಳ್ಳಿ ಪಾಲಿಕೆ ವ್ಯಾಪ್ತಿಗೆ 1500 ಮಂದಿ ವಿವಿದ ರಾಷ್ಟ್ರಗಳಿಂದ ಬಂದವರನ್ನು ಗುರುತಿಸಲಾಗಿದ್ದು, ಪ್ರತಿಯೊಬ್ಬರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದರು. ಆಟೋಗೆ ಧ್ವನಿ ವರ್ಧಕ  ಅಳವಡಿಸಿ ಪಾಲಿಕೆ ವ್ಯಾಪ್ತಿಯ ಪ್ರತಿ ಗಲ್ಲಿ, ಬೀದಿಗಳಲ್ಲಿ ಸಾರ್ವಜನಿಕರಿಗೆ ಕೊರೋನಾ ಕುರಿತಾಗಿ ಮುಂಜಾಗ್ರತೆ ಕ್ರಮಗಳ ಕುರಿತಾಗಿ ಜಾಗೃತಿ ಅಭಿಯಾನ ಕೈಗೊಂಡಿದ್ದು, ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟರೈಸ್ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಸಿಂಗಸಂದ್ರದಲ್ಲಿ ಮಾತ್ರ ಒಂದು ಶಂಕಿತ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಬೇರೆ ಯಾವ ಪ್ರಕರಣಗಳು ಕಂಡು ಬಂದಿಲ್ಲವೆಂದು ರಾಮಕೃಷ್ಣ ಅವರು ಸ್ಪಷ್ಟಪಡಿಸಿದರು.

 

Related