ಕನ್ನಡದ ಉಳಿವಿಗೆ ಭಾಷಾಭಿಮಾನ ಬೆಳೆಸಿಕೊಳ್ಳಿ : ರಜನಿ

ಕನ್ನಡದ ಉಳಿವಿಗೆ ಭಾಷಾಭಿಮಾನ ಬೆಳೆಸಿಕೊಳ್ಳಿ : ರಜನಿ

ಮುಂಡಗೋಡ : ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡ ನಾಡಿನಲ್ಲಿ ಜನಿಸಿದ ನಾವು ಕನ್ನಡದ ಋಣ ತೀರಿಸಬೇಕಾದರೆ ಕನ್ನಡದ ಪಾಲನೆ, ಫೋಷಣೆ ಮಾಡಬೇಕು ಎಂದು ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯಾಧ್ಯಕ್ಷೆ ರಜನಿ ಜೀರಗ್ಯಾಳ ಹೇಳಿದರು.
ಭಾನುವಾರ ಪಟ್ಟಣದ ನಗರಸಭಾ ಭವನದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ಮುಂಡಗೋಡ ತಾಲ್ಲೂಕು ಸಮಿತಿ ಆಯೋಜಿಸಿದ ತಾಲ್ಲೂಕು ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನೆಲ, ಜಲ ನೀಡಿರುವ ಕನ್ನಡ ನಾಡಿನ ಬಗ್ಗೆ ನಮ್ಮ ನಾಡು ನಮ್ಮ ಬಾಷೆ ಎಂಬ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಇಂಗ್ಲೀಷ್ ಭಾಷೆಗೆ ಮಾರು ಹೋಗುತ್ತಿದ್ದು, ಕನ್ನಡ ಉಳಿವಿಗಾಗಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕಿರುವುದು ಅನಿವಾರ್ಯವಾಗಿದೆ. ಕನ್ನಡವನ್ನು ಉಳಿಸಲು ಹೋರಾಟ ಹಾಗೂ ಪ್ರತಿಭಟನೆ ಮಾಡಬೇಕಿಲ್ಲ ಬದಲಾಗಿ ಪ್ರತಿ ಮನೆ ಮನೆಯಲ್ಲಿ ಕನ್ನಡ ಭಾಷೆ ಮಾತನಾಡುವುದರಿಂದ ಕೂಡ ಭಾಷೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಸಮ್ಮೇಳನಾಧ್ಯಕ್ಷೆ ಜ್ಯೋತಿ ಆಚಾರಿ ಮಾತನಾಡಿ, ಸಮಾಜದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಉನ್ನತ ಸ್ಥಾನಮಾನವಿದೆ. ಕನ್ನಡ ಸಾಹಿತ್ಯಕ್ಕೆ ಇರುವ ಇತಿಹಾಸ ಇನ್ನಾವುದಕ್ಕೂ ಇಲ್ಲ. ಸಾಕಷ್ಟು ಸಾಹಿತಿ ವಚನಕಾರರನ್ನು ಕೊಡುಗೆಯಾಗಿ ನೀಡಿದ ಕನ್ನಡನಾಡು ನಮ್ಮದು ಎಂದರು.

ಈ ಸಂದರ್ಭದಲ್ಲಿ ಮುಂಡಗೋಡ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ ಗಂಗಾAಬಿಕಾ, ಜಿಲ್ಲಾಧ್ಯಕ್ಷೆ ವಿಜಯಾ ಶೆಟ್ಟಿ, ಗ್ರೇಡ್ 2 ತಹಶೀಲ್ದಾರ್ ಜಿ.ಬಿ ಭಟ್, ರಾಜ್ಯ ಜಾನಪದ ಪ್ರಶಸ್ತಿ ಪುರಸ್ಕೃತ ಸಹದೇವ ನಡಗೇರ, ಡಾ. ರಮೆಶ ಅಂಬಿಗೇರ, ರಾಧಾಬಾಯಿ ಶಿರಾಲಿ, ವೀಣಾ ಓಶಿಮಠ, ಶಾರದಾ ರಾಥೋಡ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ ಪಾಟೀಲ, ಗೋಪಾಲ ಕನಸೆ, ಬಾಲಚಂದ್ರ ಹೆಗಡೆ, ಎಸ್.ಬಿ ಹೂಗಾರ, ಶ್ರೀಕಾಂತ ಸಾನು, ನಾಗರತ್ನ ನಾಗನೂರ, ಯಲ್ಲಪ್ಪ ಹಳ್ಳಿ, ಗೌರಮ್ಮ ಕೊಳ್ಳಾನವರ, ರೇಣುಕಾ ಚಿತ್ರಗಾರ, ಶೈಲಶ್ರೀ ಕಾಳೆ, ತಾರಾಮತಿ ಕುತ್ತೆ ಇದ್ದರು.

Related