ರಾಜೀವ್ ಗೌಡ ಕ್ಷೇತ್ರಕ್ಕೆ ದುಡಿಯುವ ಶ್ರಮಜೀವಿ  

ರಾಜೀವ್ ಗೌಡ ಕ್ಷೇತ್ರಕ್ಕೆ ದುಡಿಯುವ ಶ್ರಮಜೀವಿ  

ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಶಾಸಕ ಅಭ್ಯರ್ಥಿ ರಾಜೀವ್ ಗೌಡ ರವರ ಜನ್ಮ ದಿನಾಚರಣೆ ಹಿನ್ನಲೆಯಲ್ಲಿಂದು ನಗರದ ಕಾಂಗ್ರೆಸ್ ಭವನದಲ್ಲಿ ಅದ್ದೂರು ಕಾರ್ಯಕ್ರಮವನ್ನು ಆಯೋಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ರವರು ಇಂದು ಭಾಗವಹಿಸಿ ಶುಭಾಶಯವನ್ನು ಕೋರಿದರು.

ನಂತರ ಮಾತನಾಡಿದ ಅವರು, ರಾಜೀವ್ ಗೌಡ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ದುಡಿಯುವ ಶ್ರಮಜೀವಿ. ಶಿಡ್ಲಘಟ್ಟ ಕ್ಷೇತ್ರದಲ್ಲಿ ನಮ್ಮ ಸರ್ಕಾರದ ಸಹಕಾರೊಂದಿಗೆ ಹಾಗೂ ಪಕ್ಷದ ವತಿಯಿಂದ ಮುಂಬರುವ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ‌ ಪಂಚಾಯತಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ರಾಜೀವ್ ಗೌಡ ರವರ ನೇತೃತ್ವದಲ್ಲಿ ಬಲಪಡಿಸಿ ಗೆಲ್ಲುವ ಕಡೆ ಗಮನವಹಿಸಬೇಕು ಎಂದರು. ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬದಲಾಯಿಸುವುದು ಅಸಾಧ್ಯ: ಡಿಸಿಎಂ

ಈ ಕ್ಷೇತ್ರದಲ್ಲಿ ರಾಜೀವ್ ಅವರು ತನು ಮನ ದನ ಎಲ್ಲವನ್ನು ತಮಗಾಗಿ ಅರ್ಪಿಸಿ ಕೆಲಸ ಮಾಡುತ್ತಿದ್ದಾರೆ ಕುಡಿಯುವ ನೀರು, ಆಸ್ಪತ್ರೆ, ಹಿರಿಯ ನಾಗರಿಕರ ಸೇವೆ ಹಾಗೂ ಶಿಕ್ಷಣ, ಉನ್ನತ ವ್ಯಾಸಂಗಕ್ಕೆ ತರಬೇತಿ ಮುಂತಾದುವುಗಳನ್ನು ಈ ಭಾಗದ ಜನರಿಗೆ ಮಾಡುತ್ತಿದ್ದಾರೆ ಅವರಿಗೆ ತಮ್ಮೆಲ್ಲರ ಆಶೀರ್ವಾದ ಇರಬೇಕು ಮತ್ತು ಮುಂದಿನ ಚುನಾವಣೆಗಳಲ್ಲಿ ಅವರ ಕೈ ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ನನಗೂ ಈ ಭಾಗದ ಜನತೆ ಆಶೀರ್ವಾದ ಮಾಡಿರುವ ಕಾರಣ ಸುಮಾರು ಮೂವತ್ತು ವರ್ಷಗಳ ಕಾಲ ಸಂಸತ್ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ಕಲ್ಲಿಸಿದ್ದೀರಾ ನಾನು ನಿಮ್ಮ ಸೇವೆ ಹಾಗೂ ಈ ಭಾಗದ ಸರ್ವತೋಮುಖ ಅಭಿವೃದ್ಧಿ ಮಾಡಲು ರಾಜೀವ್ ಗೌಡ ರವರೊಂದಿಗಿದ್ದೀನಿ.

ಮತ್ತೊಮ್ಮೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಅವರಿಗೆ ದೇವರು ಆಯುರಾರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸಿದರು.

Related