ಅಬಕಾರಿ ಅಧಿಕಾರಿಗಳ ದಾಳಿ ; ಗಾಂಜಾ ಗಿಡ ವಶ

ಅಬಕಾರಿ ಅಧಿಕಾರಿಗಳ ದಾಳಿ ; ಗಾಂಜಾ ಗಿಡ ವಶ

ಚಾಮರಾಜನಗರ : ತಾಲೂಕಿನ ಬೂದಿಪಡಗ( ರಂಗಸAದ್ರ) ಕುಳ್ಳೂರು ಮಾರ್ಗದ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಬೆಳೆದಿದ್ದ ಮೂರು ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಜಪ್ತಿ ಮಾಡಿದ್ದಾರೆ.

ಚಾಮರಾಜನಗರ ಅಬಕಾರಿ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿ, ಖಾಲಿ ಜಾಗದಲ್ಲಿ 50ಕ್ಕು ಹೆಚ್ಚು ಗಾಂಜಾ ಗಿಡಗಳನ್ನು ಬೆಳೆದಿದ್ದು, ಇದನ್ನು ಪರಿಶೀಲನೆ ಮಾಡಿದಾಗ ಈ ಜಮೀನು ಯಾರದು ಎಂಬುವುದು ನಿರ್ಧಿಷ್ಟವಾಗಿ ತಿಳಿದು ಬಂದಿಲ್ಲ.

ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಪತ್ತೆ ಹಾಗೂ ಖಾಲಿ ಜಾಗದ ಭೂ ಮಾಲೀಕರ ವಿವರ ವನ್ನು ಪತ್ತೆ ಮಾಡಲು ಕಂದಾಯ ಹಾಗು ಸರ್ವೇ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ನಂದಿನಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಾಮರಾಜನಗರ ಅಬಕಾರಿ ಇಲಾಖೆಯ ಉಪ ಆಯುಕ್ತ ಮುರಳಿ ಮಾರ್ಗದರ್ಶನದಲ್ಲಿ ಉಪಅಧೀಕ್ಷಕ ಮೋಹನ್ ಕುಮಾರ್ ನೇತೃತ್ವದ ದಾಳಿಯಲ್ಲಿ ಅಬ್ಕಾರಿ ನಿರೀಕ್ಷಕರಾದ ಮೀನಾ, ಉಪ ನಿರೀಕ್ಷಕರಾದ ಸುನೀಲ್ ಕುಮಾರ್ ಹಾಗೂ ಅಬಕಾರಿ ಸಿಬ್ಬಂದಿಗಳಾದ ರವಿಕುಮಾರ್, ಕೃಷ್ಣಮೂರ್ತಿ, ಮಣಿಕಂಠ, ಮಹೇಂದ್ರ, ನಾಗೇಶ್, ವಾಹನ ಚಾಲಕ ವೀರತ್ತಪ್ಪ ಸೋಮಣ್ಣ ಇವರು ದಾಳಿಯಲ್ಲಿ ಭಾಗವಹಿಸಿದ್ದರು.

Related