ಏರ್ಪಡಿಸಿದ್ದ ಕಥೆ ಸ್ಪರ್ಧೆಯಲ್ಲಿ ರಾಧಾ, ಪ್ರೀತಮ್‌ಗೆ ಮೊದಲ ಸ್ಥಾನ

ಏರ್ಪಡಿಸಿದ್ದ ಕಥೆ ಸ್ಪರ್ಧೆಯಲ್ಲಿ ರಾಧಾ, ಪ್ರೀತಮ್‌ಗೆ ಮೊದಲ ಸ್ಥಾನ

ಧಾರವಾಡ-ನಗರದ ಕಿಟೆಲ್ ವಿಜ್ಞಾನ ಮಹಾವಿದ್ಯಾಲಯದ ಬಿ.ಎಸ್.ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ರಾಧಾ ಗೋಡಕುಂದರಗಿ ಹಾಗೂ ಹುಬ್ಬಳ್ಳಿಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯದ ಬಿ.ಸಿ.ಎ. ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಪ್ರೀತಮ್ ಸೇಠ್ ಇಲ್ಲಿಯ ಸಿ.ಎಸ್.ಐ. ವಾಣಿಜ್ಯ ಮಹಾವಿದ್ಯಾಲಯವು ಐ.ಕ್ಯುಎ.ಸಿ. ಭಾಷಾ ವೇದಿಕೆ ಹಾಗೂ ಸಿ.ಎಸ್.ಐ. ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಆನ್‌ಲೈನ್‌ನಲ್ಲಿ ಏರ್ಪಡಿಸಿದ್ದ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಕನ್ನಡ ಹಾಗೂ ಇಂಗ್ಲೀಷ್ ವಿಭಾಗಗಳಲ್ಲಿ ಪ್ರಥಮ ಸ್ಥಾನ ಹಾಗೂ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.
ಕನ್ನಡ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಧಾರವಾಡದ ರ್ಸಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎಂ.ಕಾA. ಅಂತಿಮ ವರ್ಷದ ಅಕ್ಷತಾ ಬಂಡಿ ಗಳಿಸಿದ್ದರೆ, ತೃತೀಯ ಸ್ಥಾನವನ್ನು ಹುಬ್ಬಳ್ಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ. ಅಂತಿಮ ವರ್ಷದ ಮೇಘನಾ ಹುಂಬಿ ಪಡೆದುಕೊಂಡಿದ್ದಾರೆ. ಅದೇ ರೀತಿ ಇಂಗ್ಲೀಷ್ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಹುಬ್ಬಳ್ಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದ ರಿಜುತಾ ಹಿರೇಮಠ ಹಾಗೂ ತೃತೀಯ ಸ್ಥಾನವನ್ನು ಹುಬ್ಬಳ್ಳಿಯ ನೆಹರೂ ಕಾಲೇಜಿನ ಆಫ್ರೀನ್ ಜಹಾನ್ ಮಕ್ಕುಬಾಯಿ ಪಡೆದಿರುತ್ತಾರೆ.
ಆನ್ ಲೈನ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು ೬೧ ಸ್ಪರ್ಧಿಗಳು ಭಾಗವಹಿಸಿದ್ದರು. ಬೈಲಹೊಂಗಲದ ಕೆಆರ್‌ಸಿ ಪದವಿ ಮಹಾವಿದ್ಯಾಲಯದ ಪ್ರೊ.ಸಂಗಮನಾಥ ಲೋಕಾಪುರ ಹಾಗೂ ನಿಪ್ಪಾಣಿಯ ಪದವಿ ಮಹಾವಿದ್ಯಾಲಯದ ಡಾ.ವಿಜಯಕುಮಾರ ಧಾರವಾಡ ಕನ್ನಡ ವಿಭಾಗದಲ್ಲಿ ಮೌಲ್ಯಮಾಪನ ಮಾಡಿದ್ದರೆ, ಇಂಗ್ಲೀಷ ವಿಭಾಗದಲ್ಲಿ ಸಿ.ಎಸ್.ಐ. ಮಹಾವಿದ್ಯಾಲಯದ ಪ್ರೊ. ಥಿಯೊಫಿಲಸ್ ಭಿಲ್ಲಾ ಹಾಗೂ ಎಂ.ಕಾA. ವಿಭಾಗದ ಪ್ರೊ. ಪೀಟರ್ ರಾವ್ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸಿದ್ದಾಗಿ ಸಿ.ಎಸ್.ಐ. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಮಲಾ ಢವಳೆ ತಿಳಿಸಿದ್ದಾರೆ.

Related