ಕ್ವೀನ್ ಎಲಿಜಬೆತ್‌ ಇನ್ನಿಲ್ಲ

ಕ್ವೀನ್ ಎಲಿಜಬೆತ್‌ ಇನ್ನಿಲ್ಲ

ಲಂಡನ್: ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಪ್ರಸಿದ್ಧಿ ಹೊಂದಿದ್ದ ರಾಣಿ ಎಲಿಜಬೆತ್ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂಬ ಖ್ಯಾತಿ ಹೊಂದಿದ್ದರು. ಆದರೆ ಇದೀಗ ಅವರು ತಮ್ಮ 96​​ನೇ ವಯಸ್ಸಿನಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಕ್ವೀನ್ ಎಲಿಜಬೆತ್ ಅವರ ನಿಧನಕ್ಕೆ ವಿಶ್ವಾದ್ಯಂತ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಸುದೀರ್ಘ ಕಾಲ ಬ್ರಿಟನ್ನಿನ ರಾಣಿಯಾಗಿದ್ದ 96 ವರ್ಷದ ಎಲಿಜಬೆತ್ ಅವರು ಗುರುವಾರ ಮಧ್ಯಾಹ್ನ ಬಲ್ಮೋರಲ್‌ನಲ್ಲಿ ನಿಧನ ಹೊಂದಿದ್ದಾರೆ ಎಂದು ಬ್ರಿಟನ್‌ನ ಬಕಿಂಗ್‌ ಹ್ಯಾಮ್‌ ಅರಮನೆಯ ಮೂಲಗಳು ತಿಳಿಸಿವೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಣಿ ಎಲಿಜಬೆತ್‌ ಅವರಿಗೆ ಸೂಕ್ತ ವೈದ್ಯಕೀಯ ನಿಗಾವಣೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಎಲಿಜಬೆತ್ ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿತ್ತು. ವೈದ್ಯರು ಕೂಡ ಅವರ ಆರೋಗ್ಯದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿತ್ತು.

ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಪ್ರಸಿದ್ಧಿ ಹೊಂದಿದ್ದ ರಾಣಿ ಎಲಿಜಬೆತ್ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂಬ ಖ್ಯಾತಿ ಹೊಂದಿದ್ದರು. ಆದರೆ ಇದೀಗ ಅವರು ತಮ್ಮ 96ನೇ ವಯಸ್ಸಿನಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಕ್ವೀನ್ ಎಲಿಜಬೆತ್ ಅವರ ನಿಧನಕ್ಕೆ ವಿಶ್ವಾದ್ಯಂತ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

 

Related