ಪಂಜಾಬ್ ಸಿಎಂ ಆಸ್ಪತ್ರೆಗೆ ದಾಖಲು..!

ಪಂಜಾಬ್ ಸಿಎಂ ಆಸ್ಪತ್ರೆಗೆ ದಾಖಲು..!

ನವದೆಹಲಿ, ಜುಲೈ 21: ಆಮ್ ಆದ್ಮಿ ಪಕ್ಷದ ನಾಯಕ, ಪಂಜಾಬ್ ಮುಖ್ಯಮಂತ್ರಿ ಭಗವಂತ್ಮಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಸಲಹೆಯಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

48 ವರ್ಷದ ಭಗವಂತ್ ಮಾನ್ ಬುಧವಾರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆ ವೈದ್ಯರ ಬಳಿ ಪರೀಕ್ಷೆಗೆ ತೆರಳಿದ್ದರು. ವೈದ್ಯರ ಸಲಹೆಯಂತೆ ದೆಹಲಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಆಸ್ಪತ್ರೆ ಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ಯಾವುದೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿಲ್ಲ.

Related